ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ನಂದಾವರ ಕೋಟೆ ಮೈದಾನದಲ್ಲಿ ಮಂಗಳವಾರ ಸಂಜೆ ಕ್ರಿಕೆಟ್ ಆಟವಾಡಿದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ಮಹಮ್ಮದ್ ಅರ್ಫಾನ್ ಎಂಬವರಿಗೆ ಚೂಕು ಇರಿದು ಹಲ್ಲೆ ನಡೆಸಿದ ಘಟನೆಗೆ ಸಂಬಧಿಸಿದಂತೆ ನಗರ ಠಾಣೆ ಪೊಲೀಸರು ಬುಧವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸ್ಥಳೀಯ ನಿವಾಸಿ ನವಾಝ್, ಸಫ್ವಾನ್ ಮತ್ತು ಝಾಕಿರ್ ಎಂದು ಗುರುತಿಸಲಾಗಿದೆ. ಈ ಪೈಕಿ ಪ್ರಮುಖ ಆರೋಪಿ ನವಾಝ್ ಎಂಬಾತನು ಗಾಯಾಳು ಅರ್ಫಾನ್ ಇವರಲ್ಲಿ ರೂ ೧೦ ಸಾವಿರ ಸಾಲ ಕೇಳಿದಕ್ಕೆ ಅವರು ನೀಡದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.