ಬಂಟ್ವಾಳ: ಸಿ.ಆರ್ .ಎಪ್ .ಯೊಜನೆಯಡಿ ಮಂಜೂರಾದ 5 ಕೋಟಿ ರೂ ವೆಚ್ಚದಲ್ಲಿ ವಾಮದಪದವು – ಮಣಿಹಳ್ಳ ರಸ್ತೆ ಅಭಿವೃದ್ದಿ ಕಾರ್ಯಕ್ಕೆ ಭಾನುವಾರ ದ.ಕ.ಜಿಲ್ಲಾ ಉಸಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಿ.ಆರ್.ಎಪ್.ಯೋಜನೆಯಡಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ 16.5 ಕೋಟಿ ರೂ ಅನುದಾನವನ್ನು ಈ ಹಿಂದಿನ ಯು.ಪಿ.ಎ ಸರಕಾರ ಮಂಜೂರು ಮಾಡಿದ್ದು, ಈ ಅನುದಾನದ ಕಾಮಗಾರಿಗಳು ಈಗ ಆರಂಭಗೊಂಡಿದೆ.
2 (3)

1 (3)
ಈ ಅನುದಾನದಲ್ಲಿ ಬಂಟ್ವಾಳ ಕಸ್ಬಾ ಗ್ರಾಮದ ಕೆಂಪುಗುಡ್ಡೆ- ಅಜೆಕಲ ರಸ್ತೆ ಅಭಿವೃದ್ದಿ, ಕೋಡಪದವು ರಸ್ತೆ ಅಭಿವೃದ್ದಿಗೆ ತಲಾ 3ಕೋಟಿಯನ್ನು ಕಾದಿರಿಸಲಾಗಿದೆ. ರಾಯಿ – ಮೂಜೆ ರಸ್ತೆಯನ್ನು 4 ಕೋಟಿ ರೂ ವೆಚ್ಚದಲ್ಲಿ ಅಭಿವೃಧ್ದಿ ಪಡಿಸಲಾಗುತ್ತಿದ್ದು, ನಿಧಾನ ಗತಿಯಲ್ಲಿ ಸಾಗುತ್ತಿರುವ ಈ ರಸ್ತೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂದಿತ ಗುತ್ತಿಗೆದಾರರಿಗೆ ಸೂಚಿಸಿದರು. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ ಸಚಿವರು ಪುರಸಭೆಯ ಅಭಿವೃದ್ದಿ ಕಾರ್ಯದಲ್ಲಿ ಸಾರ್ವಜನಿಕರು ಕೂಡಾ ಸಹಕರಿಸಬೇಕೆಂದು ಅವರು ಮನವಿ ಮಾಡಿದರು. ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮೀನ್, ಸದಸ್ಯರಾದ ಪ್ರವೀಣ್ ಗಂಗಾದರ, ಜಗದೀಶ ಕುಂದರ್, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸ್ಥಳಿಯ ಮುಖಂಡರಾದ ಸದಾನಂದ ಶೆಟ್ಟಿ, ದೇವಪ್ಪ ಪಂಜಿಕಲ್ಲು, ದಿನೇಶ್ ಶೆಟ್ಟಿ, ಪಿಯೂಸ್.ಎಲ್.ರೋಡ್ರಿಗ್ರಸ್, ವಿಶ್ವನಾಥ ಗೌಡ ಮಣಿ,ವೆಂಕಪ್ಪ ಪೂಜಾರಿ,ರಾಷ್ಟ್ರೀಯ ಹೆದ್ದಾರಿ ಇಲಾಖಾ ಇಂಜೀನಿಯರ್ ನಟರಾಜ್ ಉಪಸ್ಥಿತರಿದ್ದರು. ಮಾಜಿ ತಾ.ಪಂ.ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿ, ನಾರಾಯಣ ವಂದಿಸಿದರು. ಜಯಪ್ರಕಾಶ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *