ಬಂಟ್ವಾಳ: ಹಲವು ವೈಶಿಷ್ಟಗಳೊಂದಿಗೆ ನವೀಕೃತಗೊಂಡ ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕಟ್ಟಡ , ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಾಚನ ಸಂಭ್ರಮ ಕಾರ್ಯಕ್ರಮ ಫೆ. 13 ರಂದು ನಡೆಯಲಿದೆ ಎಂದು ಅಲ್ಲಿಪಾದೆ ಚರ್ಚ್ ನ ಧರ್ಮಗುರು ವಂ.ಫಾ.ಫೆಡ್ರಿಕ್ ಮೊಂತೇರೋ ಹೇಳಿದರು.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನವೀಕೃತ ಕಟ್ಟಡದ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ವಹಿಸಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್ , ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲಿಪಾದೆ ಧರ್ಮಕ್ಷೇತ್ರ ಶೈಕ್ಷಣಿಕ,ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದ ಅವರು ದೇವಾಲಯ ಹಾಗೂ ಧರ್ಮಗುರುಗಳ ವಾಸದ ಮನೆಯ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸರಕಾರ ಮತ್ತು ದಾನಿಗಳ ಸಹಕಾರದಿಂದ ಐದು ಕೋ. ರೂ. ವೆಚ್ಚದಲ್ಲಿ ನವೀಕೃತಗೊಳಿಸಲಾಗಿದೆ ಎಂದು ತಿಳಿಸಿದರು.
ಕಟ್ಟಡದ ಉದ್ಘಾಟನೆಯ ಅಂಗವಾಗಿ ಫೆ.12 ರಂದು ಸಂಜೆ 3.30 ಕ್ಕೆ ಮೊಡಂಕಾಪು ಚರ್ಚ್ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು,ಫೆ.14 ರಂದುಧಾರ್ಮಿಕರ ದಿನ ಹಾಗೂ ಸಂಜೆ ಸೌಹಾರ್ಧ ಕೂಟ ನಡೆಯಲಿದೆ. ಬಳಿಕ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದರು.
ಫೆ.15 ಕ್ಕೆ ಸಂತ ಅಂತೋನಿಯವರ ವಾರ್ಷಿಕ ಹಬ್ಬ , ಫೆ.16 ಕ್ಕೆ ದಾನಿಗಳ ಹಾಗೂ ಕಾರ್ಮಿಕರ ದಿನ, ಫೆ. 17 ಕ್ಕೆ ಮಕ್ಕಳು ಹಾಗೂ ಯುವ ಜನರ ದಿನ, ಫೆ. 18 ಕ್ಕೆ ಕ್ರೈಸ್ತ ಕುಟುಂಬಗಳ ದಿನ, ಫೆ. 19 ಕ್ಕೆ ಸಾಮೂಹಿಕ ಪ್ರಥಮ ಪರಮ ಪ್ರಸಾದ ದಿನ ಕಾರ್ಯಕ್ರಮ ನಡೆಯಲಿದೆ.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿ ಪದಾಧಿಕಾರಿಗಳಾದ
ಲಾರೆನ್ಸ್ ಡಿ.ಸೋಜ, ಲಿಯೋ ಫೆರ್ನಾಂಡೀಸ್, ನವೀನ್ ಮೊರಾಸ್, ,ಕಿರಣ್ ನೊರೊನ್ಹಾ, ಪ್ರವೀಣ್ ಪಿಂಟೋ, ಬೆನೆಡಿಕ್ಟ್ ವಾಲ್ಟರ್, ಮೆಲರೊಯ್ ಡಿಸೋಜ, ಮಾರ್ತಿನಿ ಸ್ವಿಕೇರ,ಡೆನ್ಜಿಲ್ ನೊರೊನ್ಹಾ ಉಪಸ್ಥಿತರಿದ್ದರು.