ಬಂಟ್ವಾಳ:ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 2023-24 ನೇ ಸಾಲಿನ 43 ನೇ ಸಾಲಿನ
ವಾರ್ಷಿಕ ಮಹಾ ಸಭೆಯು ಜೂ. 11ರಂದು ಭಾನುವಾರ ಅಲೆತ್ತೂರು ಮಂಗಳಾ ಭವನದಲ್ಲಿ ನೇಮಿರಾಜ ಶೆಟ್ಟಿ ಕೊಡಂಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ನಿತಿನ್ ಪೂಜಾರಿ ನಂದರಬೆಟ್ಟು ಆಯ್ಕೆಯಾಗಿದ್ದಾರೆ.

ಉಪಾದ್ಯಕ್ಷರಾಗಿ ದಿನೇಶ್ ಸುವರ್ಣ , ಕಾರ್ಯದರ್ಶಿಯಾಗಿ ಪ್ರಶಾಂತ್,ಜೊತೆ ಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಂಘಟನನಾ ಕಾರ್ಯದರ್ಶಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಅಕ್ಷಯ್, ಜೊತೆ ಕ್ರೀಡಾ ಕಾರ್ಯದರ್ಶಿ ಲೋಹಿತ್ ,ಕಾರ್ಯಕಾರಿ ಸಮಿತಿಯಾಗಿ ವಿಜಯ್ ಕುಮಾರ್ ಭಾಸ್ಕರ್ ಕುಲಾಲ್ , ವಾಸುದೇವ ವಿಶ್ವನಾಥ ಪೈಆಯ್ಕೆಯಾದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ, ಹಿಮಕರ ಪೂಜಾರಿ, ವಿಶ್ವನಾಥ ಪೂಜಾರಿ, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.