ಬಂಟ್ವಾಳ : ತಾಲೂಕಿನ ಮಾಣಿ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ವಿಜ್ಞಾನ ಸಂಘದ ಉದ್ಘಾಟನೆಯನ್ನು
ಆಡಳಿತ ಮಂಡಳಿಯ ಅಧ್ಯಕ್ಷರಾದ  ಪ್ರಹ್ಲಾದ್ ಜೆ ಶೆಟ್ಟಿ ಯವರು ನೆರವೇರಿಸಿದರು.ಬಳಿಕ ಮಾತನಾಡಿದ ಅವರು ,ಚಂದ್ರಯಾನ -3ರ ಉಡಾವಣೆಯ ಮೂಲಕ ಭಾರತವನ್ನು ಗುರುತಿಸುವ ಕೆಲಸ ನಮ್ಮ ವಿಜ್ಞಾನಿಗಳಿಂದಾಗುತ್ತಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ಕೂಡ  ಅಂತಹ ವಿಜ್ಞಾನಿಗಳಾಗಬೇಕು ಎಂದರು.


ನೇರಳಕಟ್ಟೆ ಸರಕಾರಿ ಪ್ರೌಢಶಾಲೆ  ಅಧ್ಯಾಪಕರಾದ ಸುಧಾಕರ ಶೆಟ್ಟಿಯವರು ಅತಿಥಿಯಾಗಿ ಭಾಗವಹಿಸಿ ಹೊಸ ತಂತ್ರಜ್ಞಾನ ಯುಗದಲ್ಲಿ ಸಮೂಹ ಮಾಧ್ಯಮಗಳನ್ನು ಅವಶ್ಯಕತೆಗಳಿಗೆ ತಕ್ಕಂತೆ ಉಪಯೋಗಿಸಬೇಕು. ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿರುವುದು ಶ್ಲಾಘನೀಯ ” ಎಂದರು.


ಆಡಳಿತ ಅಧಿಕಾರಿ  ರವೀಂದ್ರ ಡಿ ಯವರು ಪ್ರಾಸ್ತಾವನೆಗೈದರು.ಬಳಿಕ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.  ವಿಜ್ಞಾನ ಸಂಘದ ಸಂಯೋಜಕರಾದ ಸುಧಾ ಮತ್ತು ಪ್ರಿಯದರ್ಶಿನಿ ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಭುವಿ ಸ್ವಾಗತಿಸಿ, ಅನಿಷಾ ಆರ್ ವಂದಿಸಿದರು, ಸಹ ಶಿಕ್ಷಕಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *