ಬಂಟ್ವಾಳ: ಪುದು, ತುಂಬೆ ಮತ್ತು ಅಡ್ಯಾರ್ ಈ ಮೂರು ಗ್ರಾಮಗಳ 20 ಜಮಾತ್ ಹಾಗೂ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ) ಫರಂಗಿಪೇಟೆ ಇದರ ಜಂಟಿ ಆಶ್ರಯದಲ್ಲಿ ಡ್ರಗ್ಸ್ ಮುಕ್ತ ಗ್ರಾಮ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಫರಂಗಿಪೇಟೆಯ ಜಂಕ್ಷನ್ ನಲ್ಲಿ  ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಕುಂಡೇಲು ಸರ್ಕಲ್ ನಿಂದ ಫರಂಗಿಪೇಟೆ ಜಂಕ್ಷನ್ ವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.ಬಿ.ಎ ಕೈಗಾರಿಕಾ ತರಬೇತಿ ಮತ್ತು ತಾಂತ್ರಿಕ ಕೇಂದ್ರ ತುಂಬೆ ಮತ್ತು ಬಿ.ಎ ಪದವಿ ಪೂರ್ವ ಕಾಲೇಜು ತುಂಬೆ,ಮಸೂದ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಸ್ಕೂಲ್ ನರ್ಸಿಂಗ್ ಮಂಗಳೂರು,ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ ಶಾಮ ರಾವ್ ನರ್ಸಿಂಗ್ ಸ್ಕೂಲ್ ವಳಚ್ಚಿಲ್,ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ಕಂಕನಾಡಿ,ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಫಿಸಿಯೋಥೆರಪಿ ಬಲ್ಮಠ ಮಂಗಳೂರು,ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು  ಜಾಥದಲ್ಲಿ ಭಾಗವಹಿಸಿದ್ದರು.

ಫರಂಗಿಪೇಟೆ ಜಂಕ್ಷನ್ ನಿಂದ ವಳಚ್ಚಿಲ್,ತುಂಬೆ ಮಾರಿಪಳ್ಳವಾಗಿ ಕಾರ್ಯಕ್ರಮದ ವೇದಿಕೆಯ ವರಗೆ ನಡೆದ ವಾಹನ ಜಾಥದಲ್ಲಿ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ಕಂಕನಾಡಿ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್  ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶನಗೈದರು.ಫರಂಗಿಪೇಟೆ ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಬ್ಬಾಸ್ ದಾರಿಮಿ ಅವರು  ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಿ.ವೈ.ಎಫ್.ವೈ.ಮುಖಂಡ ಮುನೀರ್ ಕಾಟಿಪಳ್ಳ ,ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಕೆ.ಎ ಇಕ್ಬಾಲ್ ಬಾಳಿಲ, ಶಿಹಾಬುದ್ದೀನ್ ತಲಪಾಡಿ ರವರು ಜಾಗೃತಿ ಸಂದೇಶ ಭಾಷಣ ಮಾಡಿದರು.

ಅಬ್ದುಲ್ ಅಝೀಝ್,ಇಸ್ಮಾಯಿಲ್ ಕೆ.ಇ.ಎಲ್ ವಳಚ್ಚಿಲ್,20 ಜಮಾತ್ ಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್‌ ನ ಪದಾಧಿಕಾರಿಗಳು,ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮತ್ತು ಸದಸ್ಯರುಗಳು,ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ನಾಗರಿಕರು ಅಭಿಯಾನದಲ್ಲಿ ಭಾಗವಹಿಸಿದ್ದರು.

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ (ರಿ) ಫರಂಗಿಪೇಟೆ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾರಿಪಳ್ಳ ರವರು ಪ್ರಾಸ್ತಾವಿಸಿ,ಸ್ವಾಗತಿಸಿದರು.
ಅಶ್ರಫ್ ಮಲ್ಲಿ ವಂದಿಸಿ,ನೌಫಲ್ ಕೆ.ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *