ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಷ್ ಯುವಕ ಮಂಡಲ ಶ್ರೀ ಶಾರದಾ ಪೂಜಾ ಸಮಿತಿ ಆಶ್ರಯದಲ್ಲಿ ಸುಭಾಷ್ ನಗರ ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ. 20 ರಿಂದ 23 ತನಕ ನಡೆಯಲಿರುವ ಶಾರದಾ ಪೂಜೆ ಮಹೋತ್ಸವದ  ಪೂರ್ವಭಾವಿ ಸಮಾಲೋಚನೆ ಸಭೆ ನಡೆಯಿತು.

ಸಜಿಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು,ಯುವಕ ಮಂಡಲದ ಅಧ್ಯಕ್ಷ ಎಸ್. ಶ್ರೀಕಾಂತ್ ಶೆಟ್ಟಿ,ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ,ಶಾರದಾ ಪೂಜೆ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಬರ್ಕೆ,ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ಶೆಟ್ಟಿ, ಚೆನ್ನಯ್ಯ ಪೂಜಾರಿ,ಪ್ರಹ್ಲಾದ್,ಅಶ್ವಿತ್,ನಾಗೇಶ,ದಿವ್ಯ ರಾಜ ಶೆಟ್ಟಿ ಮೊದಲಾದವರು ಸಲಹೆ ಸೂಚನೆ ನೀಡಿದರು.
ನಾಲ್ಕು ದಿನಗಳ ಕಾಲ ನಡೆಯುವ ಶಾರದಾ ಮಹೋತ್ಸವದಲ್ಲಿ ಭಜನೆ,ನಾಟಕ,ಅನ್ನದಾನ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸಲು ತೀರ್ಮಾನಿಸಲಾಯಿತು. 

By suddi9

Leave a Reply

Your email address will not be published. Required fields are marked *