ಖಾಸಗಿ ಬಸ್​​​ಗಳ ಕಿರಿಕಿರಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇದೀಗ ಮತ್ತೆ ಇವರ ದರ್ಬಾರ್​​ನಿಂದ ಕರಾವಳಿ ಜನ ಹೈರಾಣಾರಾಗಿದ್ದಾರೆ. ಖಾಸಗಿ ಬಸ್​​​ಗಳು ಓವರ್ ಲೋಡ್ ಜೊತೆ ಹೈ ಸ್ಪೀಡ್​​ನಿಂದ ಜನರ ಪ್ರಾಣ ಕಂಟಕ ಉಂಟಾಗಿದೆ. ಓವರ್ ಲೋಡ್ ನಿಂದ ವಿದ್ಯಾರ್ಥಿಯೊಬ್ಬ ಬಸ್ಸಿನಿಂದ ಕೆಳಗೆ ಬಿದ್ದಿದ್ದಾರೆ. ವಿದ್ಯಾರ್ಥಿ ಕೆಳಗೆ ಬೀಳೋ ದೃಷ್ಯ ಮೊಬೈಲ್​​​ನಲ್ಲಿ ಸೆರೆಯಾಗಿದೆ.

ತಲಪಾಡಿಯಿಂದ ಮಂಗಳೂರಿಗೆ ಬರೋ ಖಾಸಗಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಕಾಂಪಿಟೀಷನ್​​​​​ನಿಂದ ನಿತ್ಯ ಓವರ್ ಸ್ಪೀಡ್‌-ಓವರ್ ಲೋಡ್ ಮಾಡಿಕೊಂಡು ಕೆಲವು ಬಸ್​​​​​ ಓಡಾಡುತ್ತದೆ. ಒನ್​​​ ವೇಗಳಲ್ಲಿ ಖಾಸಗಿ ಬಸ್​ಗಳು ನುಗ್ಗುತ್ತಿದೆ. ಎಲ್ಲೆಂದರಲ್ಲಿ ಸ್ಟಾಪ್ ಕೊಟ್ಟು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿದೆ. ಈ ಬಗ್ಗೆ ಆರ್.ಟಿ.ಓ. ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

By suddi9

Leave a Reply

Your email address will not be published. Required fields are marked *