ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಓರ್ವ ವ್ಯಕ್ತಿಯಲ್ಲಿ ಕಾಲರಾ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಹೊಸ್ಮಾರುವಿನ ಹೋಟೆಲ್ ನಿಂದ ಸೋಂಕು ಸಾಮೂಹಿಕವಾಗಿ ಹರಡಿರುವ ಶಂಕೆಯು ವ್ಯಕ್ತವಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆಯು ಅಲರ್ಟ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾಹಿತಿ‌ ನೀಡಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್ ಮಾಲೀಕರ ಜೊತೆ ವಿಶೇಷ ಸಭೆ ನಡೆಸಿದ್ದೇವೆ. ಕಾಲರಾ ಸೋಂಕು ಪ್ರಮುಖವಾಗಿ ಕಲುಷಿತ ಆಹಾರದಿಂದ ಹರಡುವ ಸಾಧ್ಯತೆ ಇದೆ.

ಕಡ್ಡಾಯವಾಗಿ ಆಹಾರ ಗುಣಮಟ್ಟದ ಬಗ್ಗೆ ಜಾಗ್ರತೆ ವಹಿಸಲು ಸೂಚನೆ ನೀಡಿದ್ದೇವೆ‌ ಎಂದು ತಿಳಿಸಿದ್ದಾರೆ.ಕಲುಷಿತ ಆಹಾರ, ಹಳಸಿದ ಆಹಾರವನ್ನ ಗ್ರಾಹಕರಿಗೆ ನೀಡಬಾರದು. ದಿನನಿತ್ಯ ಸೇವಿಸುವ ತರಕಾರಿ, ಹಣ್ಣು ಹಂಪಲು ಗುಣಮಟ್ಟವನ್ನು ಕಾಪಾಡಬೇಕು. ಗ್ರಾಹಕರಿಗೆ ನೀಡುವ ಪಾತ್ರೆ ಪ್ಲೇಟ್ ಗಳನ್ನ ಬಿಸಿ ನೀರಿನಲ್ಲಿ ತೊಳೆಯಬೇಕು. ಬೇಸಿಗೆ ಸಂದರ್ಭದಲ್ಲಿ ಶುದ್ಧ ನೀರು ಬಳಸಬೇಕು. ಬೇಯಿಸದ ಆಹಾರವನ್ನ ಬಳಕೆ ಮಾಡುವುದನ್ನ ಕಡಿಮೆ ಮಾಡಬೇಕು‌‌.

ಆಹಾರ ಸ್ವಲ್ಪ ಕಲುಷಿತವಾದರೂ ಕಾಲರಾ ಅಪಾಯವಿದೆ ಎಂದಿದ್ದಾರೆ.ಪಂಚಾಯತ್ ರಾಜ್, ವ್ಯಾಪ್ತಿ ನೀರಿನ ತೊಟ್ಟಿಗಳ ನಿರಂತರ ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ಕ್ಲೋರಿನೇಷನ್ ಹಾಗೂ ಸೂಪರ್ ಕ್ಲೋರಿನೇಷನ್ ಮಾಡಬೇಕು. ಕಲುಷಿತ ಆಹಾರ ಸೇವನೆ ಮಾಡುವುದರಿಂದ ಕಾಲರಾ ಸೋಂಕು ಹರಡುತ್ತದೆ ತುಂಬಾ ವಾಂತಿ ಭೇದಿಯಾಗಿ ವ್ಯಕ್ತಿ ಸಾವನ್ನಪ್ಪುವ ಆತಂಕಯಿದೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *