ಮೂಡುಬಿದರೆ: ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಮತ್ತು ದೇಹದಾಡ್ರ್ಯ ಸ್ಪರ್ದೆಯಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
mbd_dec8_2
ಪುರುಷರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 49 ಅಂಕವನ್ನು ಪಡೆದ ಆಳ್ವಾಸ್ ಕಾಲೇಜು ತಂಡ ಪ್ರಶಸ್ತಿ ಗೆದ್ದರೆ, 42 ಅಂಕದೊಂದಿಗೆ ಎಸ್.ಡಿ.ಎಮ್. ಉಜಿರೆ ದ್ವಿತೀಯ ತಂಡ ಪ್ರಶಸ್ತಿ ಪಡೆದುಕೊಂಡಿದೆ.ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಒಟ್ಟು 52 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ ಎಸ್.ಡಿ.ಎಮ್. ಕಾಲೇಜು ಉಜಿರೆ 29 ಅಂಕದೊಂದಿಗೆ ದ್ವಿತೀಯ ತಂಡ ಪ್ರಶಸ್ತಿ ಪಡೆಯಿತು.
ದೇಹದಾಡ್ರ್ಯ ಸ್ಪರ್ಧೇಯಲ್ಲಿ ಆಳ್ವಾಸ್ ಕಾಲೇಜು ಐದು ವಿಭಾಗಗಳಲ್ಲಿ ಒಟ್ಟು ಮೂರು ಚಿನ್ನದ ಪದಕ ಪಡೆಯುವುದರೊಂದಿಗೆ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಆಳ್ವಾಸ್ ಕಾಲೇಜನ್ನು ಪ್ರತಿನಿಧಿಸಿದ ರಾಷ್ಟ್ರೀಯ ದೇಹದಾಡ್ರ್ಯ ಪಟು ರಕ್ಷಿತ್ ಮಿಸ್ಟರ್ ಮಂಗಳೂರು ವಿ.ವಿ. 2014 ವೈಯಕ್ತಿಕ ಪ್ರಶಸ್ತಿ ಗೆದ್ದಿದ್ದಾರೆ.

By suddi9

Leave a Reply

Your email address will not be published. Required fields are marked *