ಬಂಟ್ವಾಳ: ರೆಕಾರ್ಡರ್ ಗಳು ಕರೆಂಟ್ ಶಾಕ್ ಸಕರ್ೂಟ್ ಆಗಿ ಹೊತ್ತಿ ಭಸ್ಮವಾಗಿ, ಹೋದರೂ ಅಚ್ಚರಿಯಿಲ್ಲ, ಅಲ್ಲಲ್ಲಿ ವಿದ್ಯುತ್ ವಯರಗಳು ನೇತಾಡುತ್ತಿವೆ, ಯಾವ ಸಂದರ್ಭದಲ್ಲೂ ಹೊತ್ತಿ ಉರಿಯಬಹುದು, ಯಾರೂ ಬೇಕಾದರೂ ಕಡತಗಳನ್ನು ಕೊಂಡು ಹೋಗಬಹುದು ಅಂತಹ ಸಿತಿಯಲ್ಲಿ ಇದೆ , ಇಲಾಖೆಗೂ ಅದು ಬೇಕೂ ಗೊತ್ತಿಲ್ಲ, ಅಂತೂ ಅದು ಕತ್ತಲ ಕೊಠಡಿ. ಅದರೊಳಗೆ ಗೆದ್ದಲು ಹಿಡಿದಿರುವ ಸಾವಿರಾರು ಕಡತಗಳು, ಬಾಗಿಲು ಮುರಿದ ಬಿದ್ದ ಕಪಾಟಿನಲ್ಲಿರುವ ಬಿಲ್ ಪುಸ್ತಕಗಳು, ವಿದ್ಯುತ್ ಉಪಕರಣಗಳು, ವಾಹನದ ಟಯರ್, ಅದೇ ಕೊಠಡಿಯಲ್ಲಿ ರಾಶಿ ಬಿದ್ದಿರುವ ವ್ಯರ್ಥ ಸಾಮಾಗ್ರಿಗಳು, ….


ಇದು ಬಂಟ್ವಾಳ ಪುರಸಭೆಯ ರೆಕಾರ್ಡ್ ರೂಂನಲ್ಲಿ ಕಂಡು ಬಂದಿರುವ ದೃಶ್ಯಗಳು. ಪುರಸಭಾ ವ್ಯಾಪ್ತಿಯ ನಾಗರೀಕರು ವಿವಿಧ ಕೆಲಸಗಳಿಗಾಗಿ ಪುರಸಭೆಗೆ ಸಲ್ಲಿಸಿದ ಅಗತ್ಯ ದಾಖಲೆಗಳನ್ನು ಸರಿಯಾಗಿ ಎತ್ತಿಟ್ಟುಕೊಳ್ಳದ ಕಾರಣ ಕಡತಗಳಿಗೆ ಈ ದುಸ್ಥಿತಿ ಒದಗಿದೆ. ನಿರ್ಲಕ್ಷದ ಪರಿಣಾಮ ಬಹುತೇಕ ದಾಖಲೆ ಪತ್ರಗಳು ಈಗಾಗಲೇ ಗೆದ್ದಲು ಹುಳಗಳಿಗೆ ಆಹಾರವಾಗಿದೆ. ಪುರಸಭೆಯ ಆಡಳಿತ ಕ್ಕೂ ಇದು ಪ್ರಿಯವಾಗಿರಬೇಕು. ಕತ್ತಲ ಕೋಣೆಯಲ್ಲಿದೆ ರೆಕಾಡರ್್ ರೂಂ
ಪುರಸಭೆಯ ಹಳೆಯ ಕಟ್ಟಡದಲ್ಲಿರುವ ಕೊಠಡಿಯನ್ನು ದಾಖಲೆ ಪತ್ರಗಳನ್ನು ಸಂಗ್ರಹಿಸಿಡುವ ರೆಕಾಡರ್್ ರೂಮನ್ನಾಗಿ ಮಾಡಲಾಗಿದೆ. ರೆಕಾಡರ್್ ರೂಂಗೆ ಪ್ರವೇಶಿಸಿದಾಗ ಯಾವುದೋ ಪಾಳುಬಿದ್ದ ಮನೆಗೆ ಪ್ರವೇಶಿಸಿದ ಅನುಭವ ಉಂಟಾಗುತ್ತದೆ. ಒಳಗೆ ಕಗ್ಗತ್ತಲು. ಕಿಟಕಿಗಳಿದ್ದರೂ ವಿದ್ಯುತ್ ದೀಪದ ಬೆಳಕೇ ಬೆಳಕಿನ ಆಧಾರ. ಧೂಳು, ಜೇಡರ ಬಲೆ ಅಲ್ಲಲ್ಲಿ ಎದುರುಗೊಳ್ಳುತ್ತದೆ. ಇದರ ನಡುವೆ ಮುರಿದು ಬಿದ್ದಿರುವ ಕಪಾಟುಗಳಲ್ಲಿ ಹಾಗೂ ಅದರ ಮೇಲೆ ಹಂಚಿಗೆ ತಾಕುವಷ್ಟೇತ್ತರಕ್ಕೆ ದಾಖಲೆ ಪತ್ರಗಳ ಕಡತಗಳನ್ನು ರಾಶಿ ಹಾಕಲಾಗಿದೆ. ಬಹುತೇಕ ಕಡತಗಳನ್ನು ಗೆದ್ದಲು ತಿಂದು ಬಿಟ್ಟಿದೆ. ಸಾರ್ವಜನಿಕರು ನೀಡುವ ದಾಖಲೆ ಪತ್ರಗಳಿಗೆ ಪುರಸಭೆಯಲ್ಲಿ ಭದ್ರತೆ ಇಲ್ಲದಂತಾಗಿದೆ.
ಯವುದೇ ಮೂಲ ಸೌಲಭ್ಯಗಳನ್ನು ಒದಗಿಸ ಬೇಕಾದರೆ ಕಟ್ಟಿನಿಟ್ಟಾಗಿ ದಾಖಲೆ ಪತ್ರಗಳನ್ನು ಒದಗಿಸ ಬೇಕು ಎಂದು ಶರ್ತ ವಿಧಿಸುವ ಪುರಸಭೆ, ಹಲವು ದಿನಗಳ ಕಾಲ ವಿವಿಧ ಕಚೇರಿಗಳಿಗೆ ಅಲೆದಾಡಿ ಸಿದ್ದಪಡಿಸಿದ ಕಡತಗಳನ್ನು ಈ ರೀತಿ ನಿರ್ಲಕ್ಷದಿಂದ ಮುರುಕಲು ಕೊಠಡಿಯಲ್ಲಿ ದಾಸ್ತನು ಹಾಕಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ರೆಕಾಡರ್್ ರೂಂ ನಿಮರ್ಾಣಕ್ಕೆ ಕೇವಲ ಎರಡು ಲಕ್ಷ ರೂಪಾಯಿಯನ್ನು ಮಾತ್ರ ಅನುದಾನ ಮೀಸಲಿಟ್ಟಿರುವ ಆಡಳಿತದ ನಿಧರ್ಾರದ ಬಗ್ಗೆ ವಿಪಕ್ಷ ಸದಸ್ಯರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಸಮಧಾನ ವ್ಯಕ್ತ ಪಡಿಸಿದ್ದಾರೆ.