ಬಂಟ್ವಾಳ: ತಾಲೂಕಿನ ಮೊಗರ್ನಾಡು ಸಾವಿರ ಸೀಮೆಯ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ.2 ರಿಂದ 4 ರ ವರಗೆ ಅತಿಮಹಾರುದ್ರಯಾಗ ನಡೆಯಲಿದೆ ಎಂದು ಅತಿಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ತಿಳಿಸಿದ್ದಾರೆ.


ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ  ನೀಡಿ, ಯಾಗದ ಪ್ರಯುಕ್ತ ಚಾಂದ್ರಮಾನ ಯುಗಾದಿಯಂದು ಆರಂಭವಾದ ಪಾರಾಯಣ ಏ.29 ರ ವರೆಗೆ 18158 ಪಾರಾಯಣಗಳು ಪೂರ್ಣ ಗೊಂಡಿದ್ದು, ಯಾಗದವರೆಗೂ ಪಾರಾಯಣ ನೇರವೇರಲಿದೆ ಎಂದರು.
ವಾರಣಾಸಿಯ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ  ಸಾನಿಧ್ಯ ,ಮಾರ್ಗದರ್ಶನದಲ್ಲಿ ತಂತ್ರಿವರ್ಯರಾದ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಾಡಿನ ಸಮಸ್ತ ಸಂಸ್ಥಾನದ‌ ಮಠಾದೀಶರುಗಳ  ಉಪಸ್ಥಿತಿ,ವಿವಿಧ ಪುಣ್ಯ ಕ್ಷೇತ್ರಗಳ ಧರ್ಮಾಧಿಕಾರಿಗಳು ,ಧರ್ಮದರ್ಶಿಗಳು, ಧಾರ್ಮಿಕ ಮುಖಂಡರುಗಳ ಸಹಭಾಗಿತ್ವ ಸಾಮಾಜಿಕ ಮುಖಂಡರು ಮತ್ತು ಜನಪ್ರತಿನಿಧಿಗಳು ಸಹಕಾರದಲ್ಲಿ ಲೋಕಲ್ಯಾಣಾರ್ಥವಾಗಿ ಅತಿಮಹಾರುದ್ರಯಾಗ ನಡೆಯಲಿದೆ ಎಂದು ಅವರು ತಿಳಿಸಿದರು.
ಮೇ.2 ರಂದು ಶತರುದ್ರಾಭಿಷೇಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೇ.3 ರಂದು ಕ್ಷೇತ್ರಕ್ಕೆ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆಯ ಶೋಭಯಾತ್ರೆ,
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮೇ. 4 ರಂದು ಅತಿಮಹಾರುದ್ರಯಾಗ ನಡೆಯಲಿದ್ದು, ಸಂಜೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದ್ದು,
ಮೂರು ದಿನಗಳ ಕಾಲ ನಡೆಯುವ ಯಾಗದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ  ಎಂದು ಅವರು ತಿಳಿಸಿದರು.
ದೇವಸ್ಥಾನದ ಮುಂಭಾಗದಲ್ಲಿ 11 ಹೋಮ ಕುಂಡಗಳನ್ನು ನಿರ್ಮಿಸಲಾಗಿದ್ದು,
ಯಾಗದ ದಿನ ಸುಮಾರು 300ಕ್ಕೂ ಹೆಚ್ಚು ಋತ್ವಿಜರು ರುದ್ರಪಾರಾಯಣ ಮಾಡಿ, 11 ಪ್ರತ್ಯೇಕ ಕುಂಡಗಳಲ್ಲಿ ರುದ್ರನಿಗೆ ಸುವಸ್ತುಗಳ ಹವಿಸ್ಸನ್ನು ಅರ್ಪಿಸಿ, ಯಾಗ ಮಹಾಸಂಕಲ್ಪಕ್ಕೆ ಪರಿಪೂರ್ಣತೆ ನೀಡಲಿದ್ದಾರೆ ಎಂದು ಅವರು ವಿವರಿಸಿದರು.
ಯು.ಪಿ.ಸಿ.ಎಂ.ಯೋಗಿ ಅವರೀಮದ ಹಾರೈಕೆ :
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾಗದ ಯಶಸ್ಸಿಗೆ ಹಾರೈಸಿದ್ದು, ಮನುಕುಲಕ್ಕೆ ಒಳಿತಾಗಲಿ ಎಂಬ ಶುಭ ಸಂದೇಶವನ್ನು ನೀಡಿದ್ದಾರೆ. ಭಾರತದಲ್ಲಿ ಯಜ್ಞ ಯಾಗಾದಿಗಳನ್ನು ನಡೆಸುವ ಪವಿತ್ರ ಪರಂಪರೆ ಸಾವಿರಾರು ವರ್ಷಗಳಿಂದ ಇದೆ. ಆತ್ಮಶುದ್ಧಿ ಹಾಗೂ ಪರ್ಯಾವರಣ ಶುದ್ದಿಗೆ ಯಜ್ಞ ಮಾಧ್ಯಮವಾಗಿದೆ. ಜನಕಲ್ಯಾಣದ ಪ್ರೇರಣೆಯನ್ನು ಯಜ್ಞ ಕೊಡುತ್ತದೆ. ತನ್ಮೂಲಕ ಲೋಕಕಲ್ಯಾಣವನ್ನು ನೀಡುತ್ತದೆ. ನಿಮ್ಮ ಸಂಕಲ್ಪ ಈಡೇರಿಸಲು ಅತಿಮಹಾರುದ್ರಯಾಗ ಸಹಕಾರಿಯಾಗಲಿ ಎಂದು ಹಾರೈಸಿದ್ದಾರೆ.
ಸಚಿನ್ ರೈ ಮಾಣಿ, ಅಜಿತ್ ಕುಮಾರ್ ಬರಿಮಾರ್, ಗಣೇಶ್ ಶೆಟ್ಟಿ ಗೋಳ್ತಮಜಲು, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *