ಬಜ್ಪೆ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಬಳಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ಯುವಕ ರಂಜಿತ್ನನ್ನು(21) ಎರಡು ಬೈಕ್ ಗಳಲ್ಲಿ ಹಿಂಬಾಲಿಸಿದ ಯುವಕರ ತಂಡ ತಲವಾರು ಮತ್ತು ರಾಡ್ ಬಳಸಿ ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಪೆರ್ಮುದೆಯ ಪಿಎಫ್ಐ ಸಂಘಟನೆಯ ವಲಯಾಧ್ಯಕ್ಷ ಯಾಹ್ಯಾ(32) ಎಂದು ಗುರುತಿಸಲಾಗಿದೆ. ಕಳೆದ ರವಿವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ಸಂಭವಿಸಿತ್ತು.
ತನ್ನನ್ನು ಬೆನ್ನಟ್ಟುವ ತಂಡದಿಂದ ಬೆದರಿಂದ ರಂಜಿತ್ ಬೈಕ್ನಿಂದ ಹಾರಿದ್ದರು. ಈ ವೇಳೆ ದುಷ್ಕರ್ಮಿಗಳು ಬೀಸಿದ ಕಬ್ಬಿಣದ ರಾಡ್ ರಂಜಿತ್ ತಲೆಗೆ ಬಲವಾಗಿ ತಾಘಿದ ಪರಿಣಾಮ ಸ್ಥಳದಲ್ಲೇ ಬಿದ್ದಿದ್ದರು.

ranjith (1)

ranjith (2)
ರಂಜಿತ್ ಕೆಲಸದಿಂದ ಮನೆಗೆ ಮರಳುತ್ತಿದ್ದು ಈ ವೇಳೆ ಕೆಂಜಾರು ಬಳಿಯ ಬೆಂಕಿನಾಥೇಶ್ವರ ದ್ವಾರ ಸಮೀಪ ಎರಡು ಬೈಕ್ ಗಳಲ್ಲಿ ನಾಲ್ವರು ಅಪರಿಚಿತರು ಹಿಂಬಾಲಿಸಿದ್ದರು. ಬೈಕ್ ನಿಂದ ಕೆಳಕ್ಕೆ ಬಿದ್ದ ರಭಸಕ್ಕೆ ರಂಜಿತ್ ತಲೆ, ಮುಖ, ಕಾಲಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯರು ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆಯಲ್ಲಿ ನಾಲ್ವರು ಆರೋಪಿಗಳು ಭಾಗವಹಿಸಿದ್ದಾಗಿ ಯಾಹ್ಯಾ ಪೊಲೀಸರಲ್ಲಿ ತಿಳಿಸಿದ್ದು, ಅವರೆಲ್ಲಾ ತಪ್ಪಿಸಿಕೊಂಡಿದ್ದಾರೆ. ಕ್ಷುಲಕ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರಲ್ಲಿ ಯಾಹ್ಯಾ ಬಾಯ್ಬಿಟ್ಟಿದ್ದಾನೆನ್ನಲಾಗಿದೆ. ಉಳಿದ ಮೂವರ ಸುಳಿವು ಪೊಲೀಸರಿಗೆ ಲಭಿಸಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ಸೆಕ್ಷನ್ 307ರ ಪ್ರಕಾರ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By suddi9

Leave a Reply

Your email address will not be published. Required fields are marked *