ಮಂಗಳೂರು:ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕುಶೇಖರ ವಲಯದ ವಾರ್ಷಿಕ ಮಹಾಸಭೆಯು ಮೇ.25 ರಂದು ಭಾನುವಾರ ಶ್ರೀ ಸುಬ್ರಮಣ್ಯ ಭಜನಾ ಮಂದಿರ ಬಿಕರ್ಣಕಟ್ಟೆ ಕೈಕಂಬದಲ್ಲಿ ಕುಲಶೇಖರ ವಲಯದ ಸಭಾ ಅಧ್ಯಕ್ಷರಾದ ಕರಿಯಂಗಳ ಲೋಕೇಶ್ ಸುವರ್ಣ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಕಾಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಂಗಳೂರು ದಕ್ಷಿಣ ಶಾಸಕ ಡಿ.ವೇದವಾಸ್ ಕಾಮತ್ ಮಾತನಾಡಿ ಅಂಚೆ ಕಚೇರಿಯಲ್ಲಿ ಟೈಲರ್ ಗಳಿಗೆ ಇನ್ಸೂರೆನ್ಸ್ ಮಾಡಲು ಅವಕಾಶವಿದೆ ಇದರ ಪ್ರಯೋಜನ ಪಡೆಯಿರಿ . ಅಲ್ಲದೆ ಟೈಲರ್ಗಳ ಯಾವುದೇ ಸಮಸ್ಯೆಗಳು ಇದ್ದರು ನಮ್ಮಿಂದ ಏನು ಆಗಬೇಕು ಅದನ್ನು ನಾನು ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಈ ಮೊದಲು ಕಷ್ಟದಲ್ಲಿ ಇದ್ದ ವಲಯದ ಕೆಲವು ಸದಸ್ಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಿ ಸಹಕರಿಸಿದ್ದೇನೆ ಎಂದರು. ಮುಖ್ಯ ಅತಿಥಿಗಳಾಗಿ ಖ್ಯಾತ ನ್ಯಾಯವಾದಿ ಶ್ರೀರಾಮ್ ಪ್ರಸಾದ್ ಜ್ಯೋತಿನಗರ ಮಂಗಳೂರು, ಮಂಗಳೂರು ಕ್ಷೇತ್ರದ ಅಧ್ಯಕ್ಷರಾದ ಹರೀಶ್ ರೈ ಪ್ರಧಾನ ಕಾರ್ಯದರ್ಶಿ ಹೇಮಲತಾ ಶೆಟ್ಟಿ , ಜಿಲ್ಲಾ ಅಧ್ಯಕ್ಷರಾದ ವಿದ್ಯಾ ಶೆಟ್ಟಿ ರಾಜ್ಯ ಅಧ್ಯಕ್ಷರಾದ ನಾರಾಯಣ ರಾಜ್ಯದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಜಿಲ್ಲಾ ಕಾರ್ಯದರ್ಶಿ ಮೋಹನ್ ಎಸ್ ಕೊಡಿ ಮಂಗಳೂರು ಕ್ಷೇತ್ರದ ಉಪಾಧ್ಯಕ್ಷರಾದ ಉದಯ ಬಂಗೇರ ರಾಜ್ಯದ ಉಪಾಧ್ಯಕ್ಷರಾದ ಸುರೇಶ್ ಸಾಲಿಯಾನ್ ಜಿಲ್ಲಾ ಮಾಜಿ ಅಧ್ಯಕ್ಷರಾದ ಜಯಂತ್ ಉರ್ಲಾಂಡಿ ಹಿರಿಯ ಸದಸ್ಯ ಸುಭಾಷ್ ಬಂಟ್ವಾಳ ಕ್ಷೇತ್ರದ ಅಧ್ಯಕ್ಷರಾದ ನಾಗೇಶ್ ಉಪಸ್ಥಿತರಿದ್ದರು.
ವಲಯದ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಅತಿಥಿ ಗಣ್ಯರನ್ನು ಹಾಗೂ ಎಲ್ಲಾ ವಲಯದ ಅಧ್ಯಕ್ಷರು ಕಾರ್ಯದರ್ಶಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಪ್ರತಿಭಾ ಪುರಸ್ಕಾರ ,ಗೌರವರ್ಪಣೆ, ಸನ್ಮಾನ
ಇದೇ ಸಂದರ್ಭದಲ್ಲಿ ವಲಯದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಲಯದ ಹಿರಿಯ ಸದಸ್ಯರಿಗೆ ಜನರಿಗೆ ಗೌರವ ಅರ್ಪಣೆ ಮಾಡಲಾಯಿತು. ಹಾಗೂ ಮಾಜಿ ಯೋಧರಾದ ಚಂದ್ರಶೇಖರ್ ಕೆ ಹಾಗೂ ರಮೇಶ್ ಇವರಿಗೆ ಗೌರವರ್ಪಣೆ ಮಾಡಲಾಯಿತು.
ಪ್ರತಿ ತಿಂಗಳ ಮೀಟಿಂಗಿಗೆ ತಪ್ಪದೆ ಬರುವ ಐದು ಜನ ವಲಯದ ಸದಸ್ಯರಿಗೆ ಬಹುಮಾನ ನೀಡಲಾಯಿತು . ವಲಯದ ಸದಸ್ಯರು ಗೇಮ್ಸ್ ನಲ್ಲಿ ಭಾಗವಹಿಸಿದ ಸದಸ್ಯರಿಗೆ ಹಾಗೂ ಅವರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು .ದಯಾನಂದ್ ಬಂಗೇರ ಕುಡುಪು ಸ್ವಾಗತಿಸಿ , ವಿದ್ಯಾ ಜ್ಯೋತಿ ಹಾಗೂ ದಯಾನಂದ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ದಿವಾಕರ್ ದನ್ಯವಾದವಿತ್ತರು.
2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಕರಿಯಂಗಳ ಲೋಕೇಶ್ ಸುವರ್ಣ ಆಯ್ಕೆ

ಕಾರ್ಯದರ್ಶಿಯಾಗಿ ಶ್ವೇತ ರವಿ ಮರು ಆಯ್ಕೆ ಸದಸ್ಯರ ಒಪ್ಪಿಗೆ ಮೇರೆಗೆ ಮಾಡಲಾಯಿತು . ಕೋಶಾಧಿಕಾರಿ ಮೋಹಿನಿ ಅಮೀನ್ ನೀರ್ ಮಾರ್ಗ ಸಂಘಟನಾ ಕಾರ್ಯದರ್ಶಿ ದಿವಾಕರ್ ರಮೇಶ್ ಹಾಗೂ ಜ್ಯೋತಿ ಉಪಾಧ್ಯಕ್ಷರು ಜಗದೀಶ್ ಶೆಟ್ಟಿ ಸುಗುಣ ಜೈ ಜೊತೆ ಕಾರ್ಯದರ್ಶಿ ದಯಾನಂದ್ ಬಂಗೇರ ವಿದ್ಯಾ ಜ್ಯೋತಿ ಆಯ್ಕೆಯಾದರು.
30 ಜನ ಕಮಿಟಿ ಸದಸ್ಯರಾಗಿ ಕ್ಷೇತ್ರ ಸಮಿತಿಗೆ ಅಧ್ಯಕ್ಷರು ಕಾರ್ಯದರ್ಶಿ ಕೋಶಾಧಿಕಾರಿ ಹಾಗೂ ಐದು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.