ಬಂಟ್ವಾಳ : ಸನಾತನ ಸಂಸ್ಕೃತಿಯ ಆಧಾರ ಕುಟುಂಬ ವ್ಯವಸ್ಥೆಯಾಗಿದ್ದು,ಕೌಟುಂಬಿಕ ವ್ಯವಸ್ಥೆ ಭದ್ರವಾದಾಗ ಸನಾತನ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿಯವರು ಹೇಳಿದ್ದಾರೆ.ವೇಣೂರಿನಲ್ಲಿ ನಡೆದ “ಸಂಸ್ಕಾರ ಸಿಂಧೂರ” ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು‌.
ಪ್ರವೀಣ್ ಚಂದ್ರ ಜೈನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.


ಪ್ರಮುಖರಾದ ಶ್ರೀಪತಿ  ಬೆಂಗಳೂರ್, ಚಂದ್ರಶೇಖರ ಶೆಟ್ಟಿ ಮಂಗಳೂರು, ನಾಗರಾಜ ಶೆಟ್ಟಿ, ಭಾಸ್ಕರ ರೈ, ವಿಜಯ ಬಿ. ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ ಉಪಸ್ಥಿತಿರಿದ್ದರು. ಸಂಯೋಜಕ ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಡಾ. ವಾರಿಜಾ ನಿರ್ಬೈಲು ಹಾಗೂ ಶಿಷ್ಯೆಯರಿಂದ  “ಸ್ವಯಂಪ್ರಭೆ” ಕಥಾಭಾಗದ ಗಮಕ ವಾಚನವು  ನಡೆಯಿತು.


ಬಳಿಕ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಜನನದಿಂದ ಮರಣದ ವರೆಗಿನ ಆಚರಣೆಗಳಲ್ಲಿನ ಬದಲಾವಣೆಗಳ ಕುರಿತು ಸುರೇಶ ಪರ್ಕಳ ಅವರು ವಿಷಯ ಮಂಡಿಸಿದರು.ಪ್ರೊ.ದತ್ತಾತ್ರೇಯ ರಾವ್,  ರಘವೀರ ಗಟ್ಟಿ,  ಶಂಕರಿ ಶರ್ಮ ಉಪಸ್ಥಿತರಿದ್ದರು‌.

ಎರಡನೇ ಅವಧಿಯಲ್ಲಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ರಾಷ್ಟ್ರ ಮತ್ತು ಧರ್ಮ ರಕ್ಷಣೆಯಲ್ಲಿ ಕಲಾವಿದರ ಪಾತ್ರ ಎಂಬುದರ ಕುರಿತು ವಿಷಯ ಮಂಡಿಸಿದರು.ಡಾI ವಾರಿಜ ನಿರ್ಬೈಲು,  ಶಶಿಕುಮಾರ್ ಇಂದ್ರ, ಅನಿಲ್ ಪಂಡಿತ್ ಬ್ರಹ್ಮರಕೊಟ್ಲು,  ಅಶೋಕ್ ಮಡಂತ್ಯಾರು ಉಪಸ್ಥಿತರಿದ್ದರು.
ಸನಾತನ ನಾಟ್ಯಾಲಯದ ವಿದುಷಿ ಶ್ರವಣ ಕುಮಾರಿ ಅವರಿಂದ ನೃತ್ಯ ಪ್ರದರ್ಶನ ನಡೆಯಿತು.


ಪುತ್ತೂರಿನ ವಿದುಷಿ ನಯನಾ ವಿ ರೈ ಅವರ ಶಿಷ್ಯೆಯರು ಹಾಗೂ ವಿದ್ವಾನ್ ದೀಪಕ್ ಕುಮಾರ್ ಇವರ ನಿರ್ದೇಶನ ಹಾಗೂ ವಿದುಷಿ ಪ್ರೀತಿಕಲಾ ಇವರ ನೇತೃತ್ವದಲ್ಲಿ ಅವರ ಶಿಷ್ಯೆಯರಿಂದ ನೃತ್ಯ ವೈಭವವು  ನಡೆಯಿತು.
ಅಪರಾಹ್ನ ನಡೆದ ಮೂರನೇ ಅವಧಿಯಲ್ಲಿಕೂಡು ಕುಟುಂಬ ಪದ್ಧತಿ ಕುರಿತು
ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ವಿಷಯ ಮಂಡಿಸಿದರು.  ರೂಪಲೇಖಾ, ಸಂಪತ್ ಬಿ. ಸುವರ್ಣ, ವಿದ್ವಾನ್ ದೀಪಕ್ ಕುಮಾರ್ ಉಪಸ್ಥಿತರಿದ್ದರು.


ಸಂಜೆ ನಡೆದಸಮಾರೋಪ ಸಮಾರಂಭದಲ್ಲಿ ಪ್ರಾಂತ ಸಂಘಟನಾ ಮಂತ್ರಿ ರಾಮಚಂದ್ರ ಬೆಂಗಳೂರ್ ಸಮಾರೋಪ ಭಾಷಣಗೈದರು.
ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಸುಂದರ ಹೆಗ್ಡೆ, ಡಾ.ಶಾಂತಿ ಪ್ರಸಾದ್,  ಮನ್ಮಥ ಜೆ. ಶೆಟ್ಟಿ,  ಗಿರೀಶ್ ಕೆ.ಎಸ್, ಪಿ. ಎನ್ ಪುರುಷೋತ್ತಮ ರಾವ್,   ವಿನುತಾ  ಉಪಸ್ಥಿತರಿದ್ದರು.
ಮಹಿಮಾ ರೈ, ಜಗದೀಶ್ ಕಡೆಗೋಳಿ ಮಹಾವೀರ್ ಜೈನ್, ಕಾರ್ಯಕ್ರಮ ನಿರೂಪಿಸಿದರು.  

By suddi9

Leave a Reply

Your email address will not be published. Required fields are marked *