ಬಂಟ್ವಾಳ; ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕೆಸರ್ದ ಕೊಂಡೊಡು ಕುಸಲ್ದಗೊಬ್ಬುಲು, ಜವನೆರೆ ಗೊಬ್ಬು ಕೆಸರುಗದ್ದೆ ಕ್ರೀಡಾ ಕೂಟ ದೇವಸ್ಥಾನದ ವಠಾರದ ಗದ್ದೆಯಲ್ಲಿ ನಡೆಯಿತು.

ದೇವಸ್ಥಾನದ ಅರ್ಚಕರಾದ ದಿನೇಶ್ ಭಟ್ ದೈಲ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮಾವಂತೂರು ಶ್ರೀ ಬಲವಂಡಿ ಕ್ಷೇತ್ರದ ಗಡಿಕಾರ ದುರ್ಗಾದಾಸ್ ಶೆಟ್ಟಿ ಮಾವಂತೂರು,ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ನಾಯಕ್ ರಾಯಿ, ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ರಾಯಿ ಬೆಟ್ಟು , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಪ್ರಮುಖರಾದ ಸಂತೋಷ್ ಚೌಟ ಮಡಂದೂರ್, ಚಂದ್ರಶೇಖರ ಗೌಡ ಕಾರಂಬಡೆ, ಪ್ರಭಾಕರ ಪ್ರಭು ಸಿದ್ದಕಟ್ಟೆ, ವಸಂತ್ ಕುಮಾರ್ ಅಣ್ಣಳಿಕೆ, ರಮಾನಾಥ ರಾಯಿ, ಶರತ್ ಕುಮಾರ್ ಕೊಯಿಲ, ಸಂತೋಷ್ ಶಿವನಗರ, ರಾಜೇಶ್ ಶಿವನಗರ, ಪ್ರದೀಪ್ ಮಿಯಾಲ್ಮತ್ತಿತರರಿದ್ದರು.
ಸಮಿತ್ ಶಿವನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.