ಬಂಟ್ವಾಳ : ತಾಲೂಕಿನ ವೀರಕಂಬ ಗ್ರಾಮ ಪಂಚಾಯತ್ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸಭೆ ವೀರಕಂಭ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷೆ ಲಲಿತಾ ರವರ ಅಧ್ಯಕ್ಷತೆಯಲ್ಲಿ ಜರಗಿತು.


ವೀರಕಂಭ ಗ್ರಾಮ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಮಳೆಗಾಲದಲ್ಲಿ ಆಗುವ ಆರೋಗ್ಯ ಸಮಸ್ಯೆ ಹಾಗೂ ಗ್ರಾಮ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರಲ್ಲದೆ ವೀರಕಂಭ ಗ್ರಾಮವನ್ನು  ಕ್ಷಯ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ನೈರ್ಮಲ್ಯ ಸಮಿತಿಯ ಸದಸ್ಯರು  ಸಹಕರಿಸುವಂತೆ  ಮನವಿ ಮಾಡಿದರು.

ಸದಸ್ಯರಾದ ಜನಾರ್ದನ, ಅಬ್ದುಲ್ ರಹಿಮಾನ್, ದಿನೇಶ್ ಪೂಜಾರಿ, ಜಯಪ್ರಸಾದ್, ಜಯಂತಿ,ಮೀನಾಕ್ಷಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ , ಆಶಾ ಕಾರ್ಯಕರ್ತರಾದ ಸ್ನೇಹ ಶೆಟ್ಟಿ,ಕೋಮಲಾಕ್ಷಿ, ಲೀಲಾವತಿ, ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೆ ಮೊದಲು ಇತ್ತೀಚೆಗೆ ನಿಧನರಾದ ಗ್ರಾಮ ಪಂಚಾಯತ್ ಸದಸ್ಯ ರಘು ಪೂಜಾರಿಯವರಿಗೆ ಮೌನ ಪ್ರಾರ್ಥನೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. 

By suddi9

Leave a Reply

Your email address will not be published. Required fields are marked *