ಸುದ್ದಿ9 ಬಂಟ್ವಾಳ ತಾಲೂಕು ಸಿದ್ದಕಟ್ಟೆಗೆ ಹೊಸದಾಗಿ ಮಂಜೂರಾಗಿರುವ 108 ಆಂಬುಲೆನ್ಸ್ ವಾಹನಕ್ಕೆ ಸಂಗಬೆಟ್ಟು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಪಂಚಾಯತ್ ಪ್ರತಿನಿಧಿಗಳ ಮತ್ತು ಗ್ರಾಮಸ್ಥರ ಸಮ್ಮುಖ ಚಾಲನೆ ನೀಡಲಾಯಿತು.
ಇದೇ ಸಂಧರ್ಭ ಸಿದ್ದಕಟ್ಟೆಯ ನಾಗರೀಕರ ಬೇಡಿಕೆಗೆ ಸ್ಪಂದಿಸಿ 108 ಆಂಬುಲೆನ್ಸ್ ವಾಹನ ಸಿದ್ದಕಟ್ಟೆಗೆ ಮಂಜೂರುಗೊಳಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಆರೋಗ್ಯ ಸಚಿವ ಯು.ಟಿ ಖಾದರ್ಗೆ ಸಿದ್ದಕಟ್ಟೆ ನಾಗರೀಕರು ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಲಜ ಎಚ್.ಪೂಜಾರಿ, ಮಾಜಿ ಅಧ್ಯಕ್ಷರಾದ ಪ್ರಭಾಕರ ಪ್ರಭು, ಸದಸ್ಯರಾದ ದೇವಪ್ಪ ಕರ್ಕೇರಾ, ಸತೀಶ್ ಪೂಜಾರಿ, ಉಮ್ಮರ್ ಫಾರೂಕ್, ಬೆನೆಡಿಕ್ಟ ಡಿ`ಕೋಸ್ತ, ಸಂದೇಶ್ ಶೆಟ್ಟಿ, ಎಪಿಎಂಸಿ ಸದಸ್ಯ ರತ್ನಕುಮಾರ್ ಚೌಟ, ಸಿದ್ದಕಟ್ಟೆ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಮುತ್ತಪ್ಪ ಕೆ, ಗ್ರಾಮಕರಣಿಕ ಶಿವಾನಂದ ನಾಟೇಕರ್ ಗಣ್ಯರಾದ ಸೀತಾರಾಮ ಶೆಟ್ಟಿ ಅಂಗರಕುಮೇರು, ಉಮನಾಥ ನಾಯಕ್, ಮಯ್ಯದಿಉಮೇಶ, ಹಮ್ಮಬ್ಬ ಕಲ್ಕುರಿ, ಪಂಚಾಯತ್ ಸಿಬ್ಬಂಧಿಗಳಾದ ಮಹಾಬಲ ನಾಯ್ಕ್, ಮಹಮ್ಮದ್ ಶಾಫಿ, ಶಶಿಧರ, ಸುರೇಶ, ಸುಮತ, ಸತೀಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು. 108 ವಾಹನ ಚಾಲಕ ರವಿ, ಶುಶ್ರೂಷಕರು(ಇಎಂಟಿ) ಹೊನ್ನೂರಪ್ಪ, ವೇಣೂರು 108 ವಾಹನ ಚಾಲಕ ನರಸಿಂಹ ನಾಯಕ್ ಮಾಹಿತಿ ನೀಡಿದರು.
