ಸುದ್ದಿ9ಮೂಡುಬಿದರೆ: ಸಂಪಿಗೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಭಾನುವಾರ ಹಳೆ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ನಡೆಯಿತು.
ಸಂಪಿಗೆ ಚರ್ಚಿನ ಧರ್ಮಗುರು ಅಪೋಲಿನರಿಸ್ ಕ್ರಾಸ್ತಾ ಅವರು ಧ್ವಜಾರೋಹನಗೈಯುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ನಗರ ಸಭೆ ಆಯುಕ್ತ ಶ್ರೀಕಾಂತ್ ಅವರು ಅಧ್ಯಕ್ಷತೆಯನ್ನು ವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಉಮಾನಾಥ ಕರ್ಕೇರಾ, ಮುಚ್ಚೂರು ಸಂತೋಷ್ ಹೆಗ್ಡೆ, ಮೂಡುಬಿದರೆ ವಲಯ ಶಿಕ್ಷಣ ಸಂಯೋಜಕ ದಿನೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ರಾವ್.ಪಿ., ಹಳೆ ವಿದ್ಯಾರ್ಥಿನಿ, ಆಳ್ವಾಸ್ ಪಿ.ಯು.ಕಾಲೇಜಿನ ಉಪನ್ಯಾಸಕಿ ತೇಜಶ್ರೀ, ವಿದ್ಯಾರ್ಥಿ ನಾಯಕಿ ಲಾವಣ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಮಾಳಿಗೆ ಮನೆ ಉದಯ ಕುಮಾರ್, ಶಾಲಾಭಿವೃದ್ಧಿ ಮಂಡಳಿಯ ಸದಸ್ಯ ನಾಗವರ್ಮ ಜೈನ್, ಆಡಳಿತ ಮಂಡಳಿಯ ಸಂಚಾಲಕ ವೇಣುಗೋಪಾಲ್ ರಾವ್.ಪಿ., ಮುಖ್ಯೋಪಾಧ್ಯಾಯ ವೆಂಕಟೇಶ್ವರ ಎಂ.ಯು. ಉಪಸ್ಥಿತರಿದ್ದರು.
ಶ್ಯಾಮಸುಂದರ ರಾವ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಅಂಚನ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಪುತ್ತಿಗೆಯಲ್ಲಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.
