ಸುದ್ದಿ9 ಮೂಡುಬಿದರೆ: ಶ್ರೀ ರಾಮಕ್ಷತ್ರಿಯ ಸೇವಾ ಸಂಘ, ಮಹಿಳಾ ವೃಂದ ಮತ್ತು ಯುವ ವೃಂದ ಇವುಗಳ ಪಂಚಮ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾನ್ವಿತರಿಗೆ ಸನ್ಮಾನ ಕಾರ್ಯಕ್ರಮವು ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ಭಾನುವಾರ ನಡೆಯಿತು.
ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಭಾಕರ ಹೆಚ್. ಕಾರ್ಯಕ್ರಮ ಉದ್ಘಾಟಿದರು. ರಾಮಕ್ಷತ್ರಿಯ ಸಮುದಾಯದಲ್ಲಿ ಜನಸಂಖ್ಯೆ ಕಡಿಮೆಯಿದ್ದರು. ಹಲವಾರು ವರ್ಷಗಳ ಇತಿಹಾಸವಿದೆ. ಮಕ್ಕಳನ್ನು ಶೈಕ್ಷಣಿವಾಗಿ ಬಲಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಘವು ಚಿಂತನೆ ನಡೆಸಬೇಕೆಂದರು.
ಕುಂದಾಪುರ ಶ್ರೀ ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೆಟ್ಟಿನ್ ಅಧ್ಯಕ್ಷತೆವಹಿಸಿದ್ದರು.
ಸನ್ಮಾನ: ಪ್ರತಿಭಾನ್ವಿತರಾದ ಸ್ಯಾಕ್ಸೋಫೋನ್ ವಾದಕಿ ವಿದ್ಯಾಶ್ರೀ ಮಂಗಳೂರು ಮತ್ತು ಚೆಂಡೆ ವಾದಕ ಸುಬ್ರಹ್ಮಣ್ಯ ಗಂಟಾಲ್ಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಮಿಜಾರು ಮೈಟ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಮಂಜುನಾಥ ಹೆಬ್ಬಾಗಿಲು, ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ, ಬೆಂಗಳೂರು ರಾಮಕ್ಷತ್ರಿಯ ಯುವಕ ಸಂಘದ ಸಾಂಸ್ಕ್ರತಿಕ ಕ ಜತೆ ಕಾರ್ಯದರ್ಶಿ ಗಣೇಶ್ ರಾವ್, ಶೈಜಲಾ ಸುರೇಶ್ ಬೆಟ್ಟಿನ್ ಮುಖ್ಯ ಅತಿಥಿಗಳಾಗಿದ್ದರು.
ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ರಾವ್ ಎಡನೀರು, ಗೌರವಾಧ್ಯಕ್ಷ ನಿತ್ಯಾನಂದ ಕೋಟೆ, ಮಹಿಳಾ ಸಂಘದ ಅಧ್ಯಕ್ಷೆ ಸುಗುಣ ರಾಧಾಕೃಷ್ಣ, ಕಾರ್ಯದರ್ಶಿ ಶಿಲ್ಪಾ ರಾಜೇಶ್, ಗೌರವಾಧ್ಯಕ್ಷೆ ಪ್ರಭಾವತಿ ಶಶಿಕಾಂತ್, ಯುವವೃಂದದ ಕಾರ್ಯದರ್ಶಿ ಸಂದೇಶ್ ಕೆ.ರಾವ್ ಉಪಸ್ಥಿತರಿದ್ದರು.
ಸೇವಾ ಸಂಘದ ಸ್ಥಾಪಕಾಧ್ಯಕ್ಷ ಸುರೇಂದ್ರ ಅತ್ತಾವರ ಸ್ವಾಗತಿಸಿದರು. ಮಹಿಳಾ ವೃಂದದ ಸ್ಥಾಪಕಾಧ್ಯೆಕ್ಷೆ ಪ್ರೇಮಾ ಚಂದ್ರಶೇಖರ ರಾವ್ ಪ್ರಾಸ್ತಾವಿಕ ಮಾತನಾಡಿದರು. ಸಾಂಸ್ಕ್ರತಿಕ ಕಾರ್ಯದರ್ಶಿ ನವೀನ್ ಚಂದ್ರ ಪರಂಪರೆಯ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಶಕುಂತಳಾ ರಾಮಚಂದ್ರ ಮತ್ತು ಸಾಂಸ್ಕøತಿಕ ಕಾರ್ಯದರ್ಶಿ ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು. ಯುವ ವೃಂದದ ಅಧ್ಯಕ್ಷ ಸೂರ್ಯ ಎಸ್.ರಾವ್ ವಂದಿಸಿದರು.
