ಬಂಟ್ವಾಳ: ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ, ವ್ಯಸನಮುಕ್ತ ಕನಾಟಕದ ನಿರ್ಮಾಣದ ಜಾಗೃತಿಯೊಂದಿಗೆ, ವಿವೇಕಾನಂದರ ಸಂದೇಶವನ್ನು ಸಾರುವ ಸದ್ದುದ್ದೇಶದೊಂದಿಗೆ ರಾಜ್ಯ ಬಿಜೆಪಿ ಯುವಮೋರ್ಚದ ವತಿಯಿಂದ ಬೆಳಗಾವಿಯಿಂದ ಹೊರಟಿರುವ ಯುವ ಚೈತನ್ಯ ಯಾತ್ರೆ ಇಂದು ಬಿ.ಸಿರೋಡಿಗೆ ಆಗಮಿಸಿತು.
ಕೈಕಂಬದ ಪೊಳಲಿ ದ್ವಾರದ ಬಳಿಯಲ್ಲಿ ಯುವ ಚೈತನ್ಯ ಯಾತ್ರೆ ರಥವನ್ನು ಸ್ವಾಗತಿಲಾಯಿತು.


ಬಳಿಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ವಿವೇಕಾನಂದರ ಪ್ರತಿಮೆಗೆ ಹಾರ ಹಾಕಿದರು. ನಂತರ ಹೊರಟ ಮೆರವಣಗೆ ಬಿ.ಸಿರೋಡಿನ ಸಾರ್ವಜನಿಕ ರಂಗಮಂದಿರಲದಲಿ ಸಾರ್ವಜನಿಕ ಮಂದಿರದ ಬಳಿ ಬಂದು ಸಾರ್ವಜನಿಕ ಸಭೆ ನಡೆಯಿತು.
ರಾಜ್ಯ ಅಧ್ಯಕ್ಷ ಮುನಿರಾಜ ಗೌಡ, ಪ್ರತಾಪಸಿಂಹ ನಾಯಕ್ ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ, ರಾಘೇಂದ್ರ, ರುಕ್ಮಯ ಪೂಜಾರಿ,ಸುಲೋಚನಾ ಜಿ.ಕೆ.ಭಟ್ಟ್, ಜಿ.ಆನಂದ, ದೇವದಾಸ ಶೆಟ್ಟಿ ರಾಜ್ಯ ಯುವಮೋರ್ಚದ ಪ್ರಧಾನಕಾರ್ಯದರ್ಶಿ ತೇಜಸ್ವಿಸೂರ್ಯ ಯುವಮೋರ್ಚದ ರಾಜ್ಯ ಉಪಾಧ್ಯಕ್ಷ ಕಿಶೋರ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬ್ರಿಜೆಶ್ ಚೌಟ, ಪೃಥ್ವಿರಾಜ್ ಬಿ.ಸಿ.ರೋಡು ಪ್ರಮುಖರಾದ ವಸಂತ ಪೂಜಾರಿ, ರತ್ನಕುಮಾರ್ ಚೌಟ, ಹರೀಶ್ ಆಚಾರ್ಯ ರಾಯಿ, ಸುರೇಶ್ ಪೂಜಾರಿ, , ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.