ಬಂಟ್ವಾಳ: ಬಿ.ಸಿರೋಡ್‍ನ ಹೃದಯ ಭಾಗದಲ್ಲಿರುವ ಭಗವತಿ ಕೋಪರೇಟಿವ್ ಬ್ಯಾಂಗೆ ನುಗ್ಗಿದ ಕಳ್ಳರು ಕೋಟ್ಯಂತರ ಮೌಲ್ಯದ ನಗ-ನಗದು ಕಳ್ಳತನ ನಡೆಸಿದ ಘಟನೆ ತಡರಾತ್ರಿ ಸಂಭವಿಸಿದೆ.

bcroad kallatana (1)

bcroad kallatana (2)

bcroad kallatana (3)

bcroad kallatana (4)

bcroad kallatana (5)

bcroad kallatana (6)

ಘಟನೆಯ ವಿವರ: ಭಗವತಿ ಕ್ರೆಡಿಟ್ ಕೋಪರೇಟಿವ್ ಬ್ಯಾಂಕ್‍ನ ಶಟರ್ ಮುರಿದು ಪಳನುಗ್ಗಿದ ಕಳ್ಳರು, 1.43 ಲಕ್ಷ ರೂ ನಗದು, 22.28 ಕೆ.ಜಿ ಕಳವುಗೈದಿದ್ದಾರೆ. ಕಳವಿಗೀಡಾದ ಸೊತ್ತುಗಳ ಒಟ್ಟು ಮೌಲ್ಯ ಆರು ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಪೊಲೀಸರು ಬ್ಯಾಂಕ್‍ನಲ್ಲಿದ್ದ ಸಿಸಿಟಿವಿ ಫುಟೇಜ್‍ಗಳನ್ನಿ ತನಿಖೆ ನಡೆಸುತ್ತಿದ್ದಾರೆ. ಕಳ್ಳರು ತನ್ನ ಕೃತ್ಯ ಎಸಗಲು ಹಿಂದಿನ ಬಾಗಿಲನ್ನು ಮುರಿದಿರುವುದು ಬೆಳಕಿಗೆ ಬಂದಿದೆ. ಯಾರೋ ಗೊತ್ತಿದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *