ಸುದ್ದಿ9 ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ರಿ. ದ.ಕ.ಜಿಲ್ಲೆ – ಉಡುಪಿ ಜಿಲ್ಲೆ ಇದರ ಪ್ರಾಯೋಜಕತ್ವದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ ಶುಭಾರಂಭವು ಸಂಘಟನೆಯ ಸ್ವಂತ ಕಟ್ಟಡ ಛಾಯಾಭವನದಲ್ಲಿ ಜ.14 ಬುಧವಾರ ಬೆಳಿಗ್ಗೆ ಗಂಟೆ 10ಕ್ಕೆ ಶುಭಾರಂಭಗೊಳ್ಳಲಿದೆ ಮತ್ತು ಇದರ ಸಭಾ ಕಾರ್ಯಕ್ರಮವು ಹಾಗೂ ರಜತ ಸಂಭ್ರಮದ ವರ್ಷಾಚರಣೆಯ ಉದ್ಘಾಟನೆಯು ಜ.17ರಂದು ಶನಿವಾರ ಲಯನ್ಸ್ ಭವನ ಮಲ್ಲಿಕಟ್ಟೆ ಮಂಗಳೂರಿನಲ್ಲಿ ಸಂಜೆ ಗಂಟೆ 4.00ಕ್ಕೆ ಜರಗಲಿದೆ.