ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಇಂದಿನಿಂದ (ಶುಕ್ರವಾರ) ಆರಂಭಗೊಂಡು 5 ದಿನಗಳ ಕಾಲ ನೂತನ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆಯಲಿರುವ ಅ.ಭಾ.ಅಂ.ವಿ.ವಿ ಕ್ರೀಡಾಕೂಟವು ಜ.16ರಿಂದ ಆರಂಭಗೊಳ್ಳಲಿದ್ದು
ದೇಶದ 158 ವಿ.ವಿ.ಗಳಿಂದ 2500ಕ್ಕೂ ಅಧಿಕ ಕ್ರೀಡಾಪಟುಗಳು ಗುರುವಾರ ಸಂಜೆ ವೇಳೆಗೆ ಆಗಮಿಸಿ ಟ್ರ್ಯಾಕ್ನಲ್ಲಿ ಅಭ್ಯಾಸ ನಿರತರಾಗಿದ್ದಾರೆ.
15 mood sports pracktis (4)

15 mood sports pracktis (2)

15 mood sports pracktis (3)
ಶುಕ್ರವಾರ ಮುಂಜಾನೆ 6.30ರಿಂದ ಮಧ್ಯಾಹ್ನ 2.30ರವರೆಗೆ ಅರ್ಹತಾ ಸುತ್ತಿನ ಕ್ರೀಡೆಗಳು ನಡೆಯಲಿದೆ. ಸಂಜೆ 4 ಗಂಟೆಯಿಂದ ಮೂಡುವೇಣುಪುರ ವೆಂಕಟರಮಣ ದೇವಸ್ಥಾನದಿಂದ ಮುಖ್ಯರಸ್ತೆಯಲ್ಲಿ ಸಾಗಿ ಸ್ವರಾಜ್ಯ ಮೈದಾನಕ್ಕೆ ಕ್ರೀಡಾ ಜ್ಯೋತಿ ಮೆರವಣಿಗೆ ನಡೆಯಲಿದೆ. ಸಂಜೆ 5.30 ವೇಳೆಗೆ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕ್ರೀಡಾಕೂಟದ 5 ದಿನವೂ 8ಗಂಟೆಯ ನಂತರ ವಿಜಯವೇದಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಇಲಾಖೆಯ ಅಧಿಕಾರಿಗಳು ಸೇರಿದಂತೆ, 1 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. 250 ತಾಂತ್ರಿಕ ಸಿಬ್ಬಂದಿಗಳು ಕೂಡ ಕ್ರೀಡಾಕೂಟಕ್ಕೆ ಸಹಕರಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *