ಮೂಡುಬಿದಿರೆ: ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ ಬಿ.ಟಿ.ರೋಡ್ನ ಮನೆಯೊಂದರಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ.ನಗದು ಕಳ್ಳರ ಪಾಲಾಗಿದೆ.
ಬೆಳ್ಮಣ್, ಕಡಂದಲೆ ಪರಿಸರದಲ್ಲಿ ಏರ್ಟೆಲ್ ಟವರ್ ನಿರ್ವಹಕರಾಗಿರುವಪ್ರಸಾದ್ ಶೆಟ್ಟಿ ಅವರ ಬಿ.ಟಿ.ರೋಡ್ನ ಮೆನೆಯಲ್ಲಿ ಕಳ್ಳತನ ನಡೆದಿದೆ.


ಪೂಪಾಡಿಕಲ್ಲು ಬಿ.ಟಿ.ರೋಡ್ನಲ್ಲಿ ಗುರುನಾರಾಯಣ ಸಂಘದಲ್ಲಿ ಗುರುವಾರ ಸಂಜೆಯಿಂದ ವಾಷರ್ಿಕೋತ್ಸವ ಸಮಾರಂಭವಿದ್ದು, ಪ್ರಸಾದ್ ಶೆಟ್ಟಿ ಅವರ ತಾಯಿ ವಿಶಾಲಾಕ್ಷಿ ಹಾಗೂ ಅಜ್ಜಿ ಸಂಜೆ 5 ಗಂಟೆಯ ವೇಳೆಗೆ ಅಲ್ಲಿಗೆ ತೆರಳಿದ್ದರು. ಪ್ರಸಾದ್ ಅವರು ಕೂಡ ಕೆಲಸ ಮುಗಿಸಿ ಸಂಜೆ 6 ಗಂಟೆ ವೇಳೆಗೆ ಅದೇ ಸಮಾರಂಭಕ್ಕೆ ಹೋಗಿದ್ದರು. ರಾತ್ರಿ 1 ಗಂಟೆಗೆ ಪ್ರಸಾದ್ ಮನೆಗೆ ಹಿಂತಿರುಗಿದ್ದು, ಈ ವೇಳೆ ಮನೆಯ ಒಳಗೆ ಮೆಣಸಿನ ಹುಡಿಯನ್ನು ಎರಚಿರುವುದು ಕಂಡುಬಂತು. ಮನೆಯ ಹಿಂದಿನ ಬಾಗಿಲನ್ನು ಪರಿಶೀಲಿಸಿದಾಗ ಚಿಲಕ ಮುರಿದು, ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಮನೆಯ ಎರಡು ಬೆಡ್ರೂಮ್ಗಳಲ್ಲೂ ಮೆಣಸಿನ ಹುಡಿಗಳನ್ನು ಎರಚಿದ್ದು, ಕಪಾಟುಗಳಿದ್ದ ಚಿನ್ನಾಭರಣ ಹಾಗೂ 10 ಸಾವಿರ ನಗದನ್ನು ಕಳವು ಗೈಯಲಾಗಿದೆ. ಕಪಾಟಿನ ಒಳಗೂ ಮೆಣಸಿನ ಹುಡಿ ಎರಚಲಾಗಿದೆ.
ಮೂಡುಬಿದರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಸ್ಥಳಕ್ಕೆ ಬೇಟಿ ನೀಡಿ ತನಿಖೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
