ಸುದ್ದಿ9 ಮೂಡುಬಿದಿರೆ : ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ಇಲ್ಲಿನ ಧವಲಾ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳು ಮೂಡುಬಿದಿರೆ ಪೊಲೀಸರ ಸಹಕಾರದೊಂದಿಗೆ ಶುಕ್ರವಾರದಂದು ರಸ್ತೆ ಸಂಚಾರ ನಿರ್ವಹಣೆಯನ್ನು ನಡೆಸಿದರು.
ಅಧಿಕ ವಾಹನಗಳ ಒತ್ತಡದಲ್ಲಿರುವ ಮೂಡುಬಿದಿರೆಯಲ್ಲಿ ಟ್ರಾಫಿಕ್ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಸಮಸ್ಯೆಯನ್ನು ನಿರ್ವಹಿಸಲು ಕಷ್ಟ ಸಾಧ್ಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾವ ರೀತಿ ಟ್ರಾಫಿಕನ್ನು ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಪೊಲೀಸರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಾರದ ಸಂತೆಯ ದಿನವಾದ್ದರಿಂದ ಮೂಡುಬಿದಿರೆಯಲ್ಲಿ ಹೆಚ್ಚಿನ ಜನ ಸಂಖ್ಯೆಯೂ ಇತ್ತು. ಒಂದು ಕಡೆಯ ರಸ್ತೆಯಿಂದ ಇನ್ನೊಂದು ಬದಿಯ ರಸ್ತೆಗೆ ಜನರು ದಾಟುವಾಗ ಸ್ವತ: ವಿದ್ಯಾರ್ಥಿಗಳೆ ಟ್ರಾಫಿಕನ್ನು ನಿರ್ವಹಣೆ ಮಾಡಿ ಜನರು ರಸ್ತೆ ದಾಟುವಾಗ ವಾಹನಗಳನ್ನು ನಿಲ್ಲಿಸಿ ರಸ್ತೆ ದಾಟುವಂತೆ ಸಹಕರಿಸಿದರು.
ಜೇಸಿಐ ಮೂಡುಬಿದಿರೆ ತ್ರಿಭುವನ್, ಆರಕ್ಷಕರ ಠಾಣೆ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಮೂರನೇಯ ದಿನವಾದ ಶುಕ್ರವಾರದಂದು ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜೇಸಿಐ ಮೂಡುಬಿದಿರೆ ತ್ರಿಭುವನ್‍ನ ಅಧ್ಯಕ್ಷ ದೀರೇಂದ್ರ ಬಲ್ಲಾಳ್, ಜೇಸಿಐನ ಆಶ್ರಿತ್, ಅಬ್ದುಲ್ ಹಮೀದ್, ಸುದೀಪ್ ಗುನ್ನನ್, ಮಹಮ್ಮದ್ ಆರಿಫ್, ಎನ್‍ಸಿಸಿ ಅಧಿಕಾರಿ ಸಿ.ಅಶೋಕ್ ಈ ಸಂದರ್ಭದಲ್ಲಿದ್ದರು.
ಬಾಕ್ಸ್ : ಟ್ರಾಫಿಕ್‍ನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಅರಿತು ತಾನೇ ಸ್ವತ: ನಿರ್ವಹಣೆ ಮಾಡಿದಾಗ ತುಂಬಾ ಸಂತೋಷವಾಯಿತು. ಇಂದು ಮಾಡಿರುವ ಸಂಚಾರ ನಿರ್ವಹಣೆಯಿಂದ ಪ್ರೇರಿತಗೊಂಡಿದ್ದೇನೆ ಮುಂದೆ ತಾನು ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ವೃತಿಯನ್ನು ಮಾಡಬೇಕೆಂದು ಕೊಂಡಿದ್ದೇನೆ ಎಂದು ಎನ್‍ಸಿಸಿ ಕೆಡೆಟ್ ಸುಶಾಂತ್ ಹೇಳಿದರು.

30 mood ncc trafic (1)

30 mood ncc trafic (2)

By suddi9

Leave a Reply

Your email address will not be published. Required fields are marked *