ಬಂಟ್ವಾಳ: ಮಾರ್ಚ್ 1 ರಂದು ಮಂಗಳೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಲಿರುವ ಸಾದ್ವಿ ಸರಸ್ವತಿ ಅವರ ಭಾವಚಿತ್ರವನ್ನು ಬಂಟ್ವಾಳ ಪರ್ಲಿಯಾ ನಿವಾಸಿ ಮಹಮ್ಮದ್ ನೌಫಾಲ್ ಆಶ್ಲೀಲವಾಗಿ ಚಿತ್ರಿಸಿ ಸಮಾಜಿಕ ಜಾಲತಾಣದಲ್ಲಿ ದೇಶದಾದ್ಯಂತ ಪ್ರಸಾರ ಮಾಡಿ ತೇಜೋವಧೆ ಮಾಡಿರುತ್ತಾರೆ. ಈ ಬಗ್ಗೆ ಆರೋಪಿಯ ವಿರುದ್ದ ಕಠಿಣ =ಕ್ರಮ ಕೈಗೊಳ್ಳಬೇಕೆಂದು ಬಂಟಾಳ ನಗರ ಠಾಣೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಬಂಟ್ವಾಳ ತಾಲೂಕು ಘಟಕ ಮನವಿ ನೀಡಿದೆ. ಈ ಸಂದರ್ಭ ತಾಲೂಕು ಘಟಕದ ಸಂಚಾಲಕ ಗುರುರಾಜ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು, ಭುವಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *