ನವದೆಹಲಿ: ಬಿಜೆಪಿ ಹೀನಾಯ ಸೋಲಿಗೆ ಕಂಗೆಟ್ಟಿರುವ ಕಿರಣ್ ಬೇಡಿ, ‘ನಾನು ಪಕ್ಷದ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದಕ್ಕಾಗಿ ಪಕ್ಷ ಹಾಗೂ ಕಾರ್ಯಕರ್ತರ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
ನರೇಂದ್ರ ಮೋದಿ, ಅಮಿತ್ ಷಾ ಸೇರಿದಂತೆ ಉನ್ನತ ನಾಯಕರು ಹಾಗೂ ಸಾಮಾನ್ಯ ಕಾರ್ಯಕರ್ತರ ವಿಶ್ವಾಸ ಹಾಗೂ ಗೌರವ ಪಡೆದುಕೊಂಡಿದ್ದೇನೆ. ಆದರೆ ನನಗೆ ಕೊಟ್ಟ ಹೊಣೆಗಾರಿಕೆನಿಭಾಯಿಸುವಲ್ಲಿ ನಾನು ಸೋತಿರುವುದಕ್ಕೆ ಕ್ಷಮೆ ಕೇಳುತ್ತೇನೆ’ ಎಂದು ತಿಳಿಸಿದರು.

‘ಇಂಥ ಸನ್ನಿವೇಶವನ್ನು ನಾನು ಈ ಹಿಂದೆಯೂ ಎದುರಿಸರಿರಲಿಲ್ಲ. ಇದೇ ಮೊದಲ ಬಾರಿ ಇಂಥದ್ದೊಂದು ಅನುಭವ ಆಗಿದೆ’ ಎಂದರು. ಚುನಾವಣಾ ಫಲಿತಾಂಶವು ಮೋದಿ ಸರ್ಕಾರದ ವಿರುದ್ಧದ ಜನಮತ ಎನ್ನುವುದನ್ನು ನಿರಾಕರಿಸಿರುವ ಅವರು ‘ಪ್ರಧಾನಿ ಮೋದಿ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ’ ಎಂದರು.