ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಸಮೀಪದ ಹಲ್ಲರ್‍ಬಳಿ ಎಂಬಲ್ಲಿ ನವವಿವಾಹಿತೆ ಶಂಕಾಸ್ಪದ ರೀತಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಇಲ್ಲಿನ ನಿವಾಸಿ ಗಣೇಶ ಪೂಜಾರಿ ಎಂಬವರ ಪತ್ನಿ ಸವಿತಾ(25) ಎಂದು ಗುರುತಿಸಲಾಗಿದೆ. ಹುಬ್ಬಳಿಯಲ್ಲಿ ಎ.ಸಿ.ಮೆಕ್ಯಾನಿಕ್ ಆಗಿ ಉದ್ಯೋಗದಲ್ಲಿರುವ ಗಣೇಶ ಅವರು ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬಂಟ್ವಾಳದಲ್ಲಿ ವರದಕ್ಷಿಣೆ ರಹಿತವಾಗಿ ವಿವಾಹವಾಗಿದ್ದರು ಎನ್ನಲಾಗಿದೆ. ಮೂಲತಃ ಕಾಸರಗೋಡಿನ ಮಂಗಲ್ಪಾಡಿ ನಿವಾಸಿಯಾಗಿರುವ ಸವಿತಾ ಅವರಿಗೆ ಮೈನಡುಕ, ಹೆದರಿಕೆ ಮತ್ತಿತರ ಕಾರಣಕ್ಕಾಗಿ ಹಲವೆಡೆ ಔಷಧಿ ಪಡೆದಿದ್ದರೂ ಗುಣಮುಖವಾಗದ ಹಿನ್ನೆಲೆಯಲ್ಲಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಹಶೀಲ್ದಾರ್ ಮಹಮ್ಮದ್ ಇಕ್ಬಾಲ್, ಉಪ ತಹಶೀಲ್ದಾರ್ ಸಾಧು ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.