ಬಜಪೆ : ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮೋನಪ್ಪ ಶೆಟ್ಟಿ ಅವರು ಮುಂದಿನ ಐದು ವರ್ಷ ಅವಧಿಗೆ ಆಯ್ಕೆಯಾಗಿದ್ದು ಈ ಮೂಲಕ ಅವರು ಸತತ ಆರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.

ಸೋಮವಾರ ಬ್ಯಾಂಕ್ನ್ ಸಭಾಂಗಣದಲ್ಲಿ ಜರಗಿದ ಚುನಾಚಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಎನ್. ಜೆ. ಗೋಪಾಲ್ ಅವರು ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ರತ್ನಾಕರ ಅವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಅಧ್ಯಕ್ಷರ ಹುದ್ದೆಗೆ ನಿಕಟಪೂರ್ವ ಉಪಾಧ್ಯಕ್ಷ ಡೇನಿಸ್ ಡಿ’ಸೋಜಾ ಅವರು ಸ್ಪರ್ದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ವಸಂತ ಅವರು ಅವಿರೋಧವಾಗಿ ಆಯ್ಕೆಯಾದರು.
ಬ್ಯಾಂಕಿನ ನಿರ್ದೇಶಕರುಗಳಾದ ಡಾ| ಎಂ. ಎಸ್. ರಾಜೇಂದ್ರ ಕುಮಾರ್, ಡೇನಿಸ್ ಡಿ ಸೋಜಾ, ರಿತೇಶ್ ಶೆಟ್ಟಿ, ಸ್ಟಾನಿ ಡಿ’ ಸೋಜ, ಮಹಮ್ಮದ್ ಹನೀಫ್, ಭಾಸ್ಕರ ಮಲ್ಲಿ, ಗೀತಾ ಕೆ. ಅಮೀನ್, ಲೀಲಾವತಿ ಹಾಗೂ ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ ಅವರುಗಳು ಉಪಸ್ಥಿತರಿದ್ದರು.