ಬಜಪೆ : ಎಕ್ಕಾರು – ಬಡಕೆರೆ ಶ್ರೀ ಜಾರಂದುಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗು ವಿಜಯಾ ಯುವ ಸಂಗಮ ಎಕ್ಕಾರು ಇದರ 18ನೇ ವರ್ಷದ ವಾರ್ಷಿಕೋತ್ಸವ – ಸಾನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭ ಶನಿವಾರ ಜರಗಿತು.
ಸನ್ಮಾನ-ಪುರಸ್ಕರ : ಕಳೆದ 40 ವರ್ಷಗಳಿಂದ ಇಲ್ಲಿನ ಜಾರದಯ ಕ್ಷೇತ್ರದಲ್ಲಿ ದೈವದ ಮುಗ ಹಿಡಿಯುವ ಕಾರ್ಯ ನಡೆಸುತ್ತಿರುವ ರಾಘು ಪೂಜಾರಿ ಹಾಗೂ 21 ವರ್ಷಗಳಿಂದ ಬಡಗ ಎಕ್ಕಾರು ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಶೀಲಾ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರಮಟ್ಟದ ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಎಕ್ಕ್ಕಾರು ಫ್ರೌಢಶಾಲೆಯ ಸುಶ್ಮಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಐದು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಬಜಪೆ ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಹಾಗೂ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ, ಶ್ರೀ ಕೊಡಮಣಿತ್ತಾಯೆ ಕ್ಷೇತ್ರದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ, ಚಂದ್ರಹಾಸ ಶೆಟ್ಟಿ ಮುಂಬಾ, ಸ್ಥಳೀಯ ಪ್ರಮುಖರಾದ ಮುರಾ ಸದಾಶಿವ ಶೆಟ್ಟಿ, ವಿಜಯ ಯುವ ಸಂಗಮದ ಅಧ್ಯಕ್ಷೆ ಭರತೇಶ್ ಮಾಡ, ಆದಶರ್್ ಶೆಟ್ಟಿ, ಅವರುಗಳು ವೇದಿಕೆಯಲ್ಲಿದ್ದರು.
ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ಸಂಯೋಜಿಸಿದರು. ಬಳಿಕ ಸಾಂಸ್ಕೃತಿಕ ವೈವಿಧ್ಯ ಜರಗಿತು.