ಬಜ್ಪೆ: ಕಿನ್ನಿಗೋಳಿ ಸಮೀಪದ ಹೊಸಕಾಡು ಪ್ರದೇಶದಲ್ಲಿ ಸರಣಿ ಕಳ್ಳತನ ನಡೆದಿದ್ದು ಸುಮಾರು 17.5 ಪವನ್ ಚಿನ್ನ ಮತ್ತು 10 ಸಾವಿರ ರೂಪಾಯಿ ನಗದನ್ನು ಕಳವು ಗೈದು ಪರಾರಿಯಾಗಿದ್ದಾರೆ. ಘಟನೆ ನಿನ್ನೆ ತಡರಾತ್ರಿ ನಡೆದಿದ್ದು ಸ್ಥಳಕ್ಕೆ ಮುಲ್ಕಿ ಪೋಲಿಸರು ಬೇಟಿ ನೀಡಿ ತನಿಕೆ ನಡೆಸುತ್ತಿದ್ದಾರೆ. ಹೊಸಕಾಡಿನ ವಿಶ್ವನಾಥ್ ಶೆಟ್ಟಿಗಾರ್ ಎಂಬುವವರ ಮನೆಯ ಮುಂಬಾಗದ ತೆರೆದ ಕಿಟಕಿಯ ಬಾಗಿಲಿನ ಮೂಲಕ ಮನೆಯ ಮುಂಬಾಗಿಲಿನ ಒಳಬದಿಯ ಚಿಲಕ ತೆಗೆದಿದ್ದು ಮನೆಯ ಕಾಪಾಟಿನಲ್ಲಿದ್ದ 17,50 ಪವನ್ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದಾರೆ, ಬಾಗಿಲಿನ ಚಿಲಕ ಒಳಬದಿಯಿಂದ ಸುಲಭವಾಗಿ ತೆರೆಯಲು ಸೋಪ್ ವಾಯಿಲ್ ಕಿಟಕಿಯ ಮೂಲಕ ಸಿಂಪಡಿಸಿದ್ದಾರೆ, ಸೋಪ್ ವಾಯಿಲ್ ಮನೆಯ ಗೋಡೆ ಮತ್ತು ನೆಲದಲ್ಲಿ ಬಿದ್ದಿದ್ದು ಮಾತ್ರವಲ್ಲದೆ, ಮನೆಯ ಹೊರಗೆ ವಾಯಿಲ್ ಡಬ್ಬವನ್ನು ಎಸೆದು ಹೋಗಿದ್ದಾರೆ ಘಟನೆ ನಡೆದ ಸಂದರ್ಭ ಮನೆಯಲ್ಲಿ ನಾಲ್ಕು ಮಂದಿ ಇದ್ದು ಇವರಿಗೆ ಗೊತ್ತಾಗದಂತೆ ಕಳ್ಳರು ಎಚ್ಚರ ವಹಿಸಿದ್ದಾರೆ, ನಂತರ ಅಲ್ಲೇ ಸ್ವಲ್ಪ ದೂರದಲ್ಲಿರುವ ಅಹಮದ್ ಎಂಬುವವರ ಮನೆಗೆ ಹತ್ತಿರ ಹೋಗಿ ಮನೆಯ ಹಿಂಬಾಗಿಲಿನ ಚಿಲಕ ತೆಗೆಯಲು ಪ್ರಯತ್ನಿಸಿದ್ದಾರೆ ಆದರೆ ಅದು ಸಾದ್ಯವಾಗಿಲ್ಲ ಹಿಂಬಾಗಿಲಿನ ಹೊರಗಿನ ಚಿಲಕವನ್ನು ಹಾಕಿ ಕಳ್ಳರು ಮುಂದುವರಿದ್ದಿದ್ದಾರೆ, ನಂತರ ಅಲ್ಲೇ ಇದ್ದ ಹರೀಶ್ ಸುವರ್ಣ ಎಂಬುವವರ ಮನೆಯ ಕಿಟಕಿ ಮೂಲಕ ಹಿಂಬಾಗಿಲಿನ ಚಿಲಕ ತೆಗೆದು ಒಳ ಪ್ರವೇಶಿಸಿ ಹರೀಶ್ ಸುವರ್ಣ ಅವರು ಮಲಗಿದ ಕೊಣೆಗೆ ಹೋಗಿ ಸೂಟ್ ಕೇಸ್ ನ್ನು ತಂದು ಮನೆಯ ಅಡುಗೆ ಮನೆಯಲ್ಲಿ ತೆರೆದು ಅದರಲ್ಲಿದ್ದ 10 ಸಾವಿರ ರೂಪಾಯಿಯನ್ನು ತೆಗೆದಿದ್ದಾರೆ, ಮನೆಯ ಇನ್ನೋದು ಕೋಣೆಯಲ್ಲಿ ಹರೀಶ್ ಅವರ ಮಗಳು ಮತ್ತು ಅತ್ತೆ ಮಲಗಿದ್ದು ಅಲ್ಲಿ ಮೊಬೈಲ್ ಚಾರ್ಜರ್ ಲೈಟ್ ಉರಿಯುತಿತ್ತು ಅದರ ಮೇಲೆ ಕೈ ಹಿಡಿದು ಮೆಲ್ಲನೆ ಸ್ವೀಚ್ ಅಪ್ ಮಾಡಿದ್ದಾರೆ, ನಂತರ ಕಪಾಟಿನ ಹತ್ತಿರ ಎರಡು ಮಂದಿ ಬಂದು ಕಪಾಟಿನ ಬಾಗಿಲು ತೆರೆಯಲು ಹೋಗಿದ್ದಾರೆ, ಇದನ್ನೇಲ್ಲ ಹರೀಶ್ ಅವರ ಮಗಳು ಮಲಗಿದಲ್ಲೇ ಗಮನಿಸುತ್ತಿದ್ದು, ಕೂಡಲೇ ಕೆಮ್ಮು ಬಂದ ಹಾಗೆ ನಾಟಕ ಮಾಡಿದ್ದಾಳೆ ಕೂಡಲೇ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ, ನಂತರ ಹರೀಶ್ ಅವರ ಮಗಳು ಮನೆಯವರನ್ನು ಎಬ್ಬಿಸಿದ್ದಾರೆ, ಕೂಡಲೇ ಪಂಚಾಯತ್ ಸದಸ್ಸ್ಯ ಮಯ್ಯದಿ ಯವರಿಗೆ ಪೂನಾಯಿಸಿದ್ದಾರೆ ರಾತ್ರಿ ಸುಮಾರು 3 ಗಂಟೆಯ ಹೊತ್ತಿಗೆ ಮೈಯದಿಯವರು ಮನೆಗೆ ಬಂದು ಪರಿಶೀಲಿಸಿದಾಗ ಕಳ್ಳತನ ನಡೆದಿದ್ದು ಖಚಿತ ಪಡಿಸಿದ ನಂತರ ಮುಲ್ಕಿ ಪೋಲಿಸರಿಗೆ ಕರೆಮಾಡಿದ್ದಾರೆ. ಮುಲ್ಕಿ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ, ವಿಶೇಷವೆಂದರೆ ವಿಶ್ವನಾಥ್ ಶೆಟ್ಟಿಗಾರ್ ಅವರ ಮನೆ ಯವರು ಬೆಳಿಗೆ ಎದ್ದ ಸಂದರ್ಭ ಮುಂಬಾಲು ತೆರೆದಿದ್ದು ಆ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ. ಶ್ವಾನ ಸುಮಾರು 100 ಮೀಟರ್ ರಸ್ತೆಯ ಮೂಲಕ ಸಾಗಿ ನಂತರ ಕಾಲು ದಾರಿ ಮೂಲಕ ಸಾಗಿದೆ ಅಲ್ಲಿ ಬೈಕ್ ಚಕ್ರದ ಗುರುತುಗಳಿದ್ದು ಕಳ್ಳರು ಬೈಕ್ ಅಲ್ಲಿ ನಿಲ್ಲಿಸಿ ನಡೆದುಕೊಂಡು ಬಂದು ಕಳ್ಳತನ ಮಾಡಿರುವ ಸಾದ್ಯತೆ ಇದೆ, ಎರಡು ಜನ ಕಳ್ಳರು ಬಂದಿರುವ ಸಾದ್ಯತೆ ಇದ್ದು ಇದರಲ್ಲಿ ಸ್ಥಳಿಯರ ಕೈವಾಡ ಇರುವ ಸಾದ್ಯತೆ ಇದೆ, ಸುಮಾರು 6 ತಿಂಗಳ ಹಿಂದೆ ಕಿನ್ನಿಗೋಳಿಯಲ್ಲಿ ಇಂತಹದ್ದೇ ಪ್ರಕರಣ ನಡೆದಿದ್ದು ಅಲ್ಲೂ ಮನೆಯವರು ಮಲಗಿದ್ದ ಸಂದರ್ಭ ಸಿ,ಸಿ ಕ್ಯಾಮಾರ ಹೊಡೆದು ಹಾಕಿ ಮನೆಗೆ ನುಗ್ಗಿ, ಸಿಕ್ಕಿದನ್ನು ದೋಚಿ ಪರಾರಿಯಾಗಿದ್ದನ್ನು ಇಲ್ಲಿ ನೆನಪಿಸ ಬಹುದುದಾಗಿದೆ ಒಟ್ಟಿನಲ್ಲಿ ಚಿರತೆ ಹಾವಳಿ, ಸರ ಕಳ್ಳತನಗಳ ಮದ್ಯೆ ಇದು ಇನ್ನೋಂದು ಸಮಸ್ಸ್ಯೆಯಾಗಿ ಪರಿಣಮಿಸಿದೆ
. kallatanaa (1)

kallatanaa (2)

kallatanaa (4)

kallatanaa (7)

By suddi9

Leave a Reply

Your email address will not be published. Required fields are marked *