ದೇಶ ಪ್ರಗತಿಯ ಕನಸು ಶೈಕ್ಷಣಿಕ ಕ್ರಾಂತಿಯಿಂದ ನನಸಾಗಿಸಲು ಸಾಧ್ಯ
ದೇಶ ಪ್ರಗತಿಯ ಕನಸು ಶೈಕ್ಷಣಿಕ ಕ್ರಾಂತಿಕಾರಿ ಪ್ರಗತಿಯಿಂದ ನನಸಾಗಿಸಲು ಸಾಧ್ಯ. ಇದೀಗ ಜಗದ ಬದುಕಿನ ಪ್ರತೀ ಕ್ಷಣವೂ ಕಂಪ್ಯೂಟರ್ ಅವಲಂಬಿತವಾಗಿದ್ದು ಸಂಪನ್ಮೂಲಗಳ ಸದ್ಭಳಕೆಯ ಪ್ರತಿಭೆ-ಜ್ಞಾನ ಮತ್ತು ಜಾಣ್ಮೆ ಇದ್ದಾಗ ಮಾತ್ರ ಭವಿಷ್ಯದ ಪ್ರಗತಿಯ ಬಗ್ಗೆ ಕನಸು ಕಾಣಲು ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಶಾಂತರಾಮ್ ಶೆಟ್ಟಿ ಹೇಳಿದರು.

ಕೆಂಜಾರು ಶ್ರೀದೇವೀ ತಾಂತ್ರಿಕ ಮಹಾವಿದ್ಯಾಲಯದ ನಾನಾ ವಿಭಾಗಗಳ ಆಶ್ರಯದಲ್ಲಿ ಸೋಮವಾರ ಆರಂಭಗೊಂಡ ಸಂಭ್ರಮ್-15ರ ಅಂಗವಾಗಿ ರಾಷ್ಟ್ರಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಗಳಾದ ಎಕ್ಲಾನ್ ಹಾಗೂ ಮೇಧಾವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಅಭ್ಯಾಗತರಾಗಿದ್ದ ಭಾರತಿ ಶಿಪ್ಯಾರ್ಡ್ನ ಜನರಲ್ ಮ್ಯಾನೇಜರ್ ಮಹೇಶ್ ಎಂ.ಎಸ್. ಅವರು ಮಾತನಾಡಿ ಸದ್ಯದ ಭವಿಷ್ಯದಲ್ಲಿ ದೇಶದ ಆರ್ಥಿಕ ಪ್ರಗತಿ ಹಾಗೂ ಜಿಡಿಪಿ ದರ ಕ್ಷಿಪ್ರ ಏರಿಕೆಯಾಗಲಿದ್ದು ಕೈಗಾರಿಕಾ ಕ್ರಾಂತಿ ಹಾಗೂ ಇಂಧನ ಬಳಕೆ ಬಗ್ಗೆ ಕಾಳಜಿ-ಜಾಗೃತಿ-ಹೆಚ್ಚಿಸುವ ಅಗತ್ಯವಿದೆ. ಜತೆಗೆ ಪರ್ಯಾಯ ಇಂಧನ ಮೂಲಗಳನ್ನು ಹೆಚ್ಚು ಅಭಿವೃದ್ಧಿ ಪಡಿಸುವುದು ಇಂದಿನ ತುರ್ತು ಅಗತ್ಯ ಎಂದು ಹೇಳಿದರು.
ನಾನಾ ಸ್ಪರ್ಧೆಗಳಲ್ಲಿ ನಾನಾ ರಾಜ್ಯಗಳ 400ಕ್ಕೂ ಹೆಚ್ಚು ಕಾಲೇಜು ತಂಡಗಳು ಪಾಲ್ಗೊಂಡಿವೆ. ಇದೇ ಸಂದರ್ಭ ಸೂರ್ತಿ ಭಿತ್ತಿ ಪತ್ರಿಕೆ ಸಂಕಲನವನ್ನು ಅನಾವರಣಗೊಳಿಸಲಾಯಿತು.
ಶ್ರೀದೇವಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ನ ಉಪಾಧ್ಯಕ್ಷ ನಿಶ್ ಶೆಟ್ಟಿ, ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ, ಟ್ರಸ್ರಿ ಪ್ರಿಯಾಂಕ ಎನ್. ಶೆಟ್ಟಿ ವೇದಿಕೆಯಲ್ಲಿದ್ದರು.
ಪ್ರಿನ್ಸಿಪಾಲ್ ಡಾ| ದಿಲೀಪ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಶ್ರವಣ್ ವಂದಿಸಿದರು. ಜೋಸ್ ಅತಿಥಿಗಳನ್ನು ಪರಿಚಯಿಸಿದರು. ನಬಿಲ್ ಹಾಗೂ ತುಷಾರ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕಿ ಸವಿತಾ. ಜೆ., ವಿದ್ಯಾರ್ಥಿ ಸಂಚಾಲಕರಾದ ವಿನೀತ್ ಪೂಜಾರಿ, ಸಂಜನಾ ರಾಜ್, ಅನ್ಮೋಲ್ ಹೆಗ್ಡೆ ಸಹಕರಿಸಿದರು.










Thanks Suddi9 Reporter for The photos .Thanks a lot
Very Nice Online News Portal By suddi9.Also Thanks For Reporter For the pics