ಬಂಟ್ವಾಳ:ಸಮಾಜದಲ್ಲಿ ಯುವಶಕ್ತಿ ಬೆಳೆದು ಬ್ಯಾಂಕಿಂಗ್ ಸಾಲ ಸೌಲಭ್ಯ ಪಡೆದು ಸ್ವಂತ ಉದ್ಯಮಿಯಾಗಲು ಪ್ರಯತ್ನಿಸಬೇಕು. ಆ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಕ್ರೀಡೆ ಜೊತೆಗೆ ರಕ್ತದಾನ ಮತ್ತಿತರ ಚಟುವಟಿಕೆಯಿಂದ ಆರೋಗ್ಯ ಸೇವೆಯನ್ನೂ ಮಾಡಲು ಮುಂದಾಗಬೇಕು ಎಂದು ಸೋಣರ್ಾಡು ಕೆನರಾ ಬ್ಯಾಂಕಿನ ಶಾಖಾಧಿಕಾರಿ ರಮೇಶ್ ಎನ್. ಹೇಳಿದ್ದಾರೆ.


ತಾಲ್ಲೂಕಿನ ರಾಯಿ ಯುವಶಕ್ತಿ ಫ್ರೆಂಡ್ಸ್ ಮತ್ತು ವಿಜಯಲಕ್ಷ್ಮಿ ಕ್ರಿಕೆಟಸರ್್ ವತಿಯಿಂದ ಇಲ್ಲಿನ ಬಲಪು ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಳೀಯ ಪ್ರಗತಿಪರ ಕೃಷಿಕ ಜಿ.ರಾಮಸುಂದರ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಕೆ.ಪಿ.ಲೋಬೊ, ಲಾದ್ರು ಮಿನೇಜಸ್, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಮತ್ತಿತರರು ಶುಭ ಹಾರೈಸಿದರು.
ವರ್ಣಚಿತ್ರ ರಚನೆ:
ಇದೇ ವೇಳೆ ಎಫ್ಎಂ ರೇಡಿಯೋ ನಿವರ್ಾಹಕ ರೂಪೇಶ್ ನೇತೃತ್ವದಲ್ಲಿ ಕಲಾವಿದರ ತಂಡವು ದೇಶಭಕ್ತಿಗೀತೆ ಹಾಡಿಗೆ ಮುಂಬೈ ಹುತಾತ್ಮ ಉನ್ನಿ ಕೃಷ್ಣನ್ ವರ್ಣಚಿತ್ರವನ್ನು ಸ್ಥಳದಲ್ಲೇ ರಚಿಸುವ ಮೂಲಕ ಜನಾಕರ್ಷಣೆ ಪಡೆಯಿತು.
ಸಂಘದ ಗೌರವಾಧ್ಯಕ್ಷ ಸುಧೀರ್ ಕುಮಾರ್, ಅಧ್ಯಕ್ಷ ಪ್ರದೀಪ್ ಕುಮಾರ್, ಜಗದೀಶ ಕೊಯಿಲ, ಶ್ರೀಕಾಂತ್ ಶೆಟ್ಟಿ, ಮೋಹನ ರಾಯಿ, ಅವಿನ್ ವೇಗಸ್, ಕಿರಣ್ ಕುಮಾರ್, ಸುಧೀರ್ ಗೌಡ, ರಾಜೆಶ ಗೌಡ ಪುರುಷೋತ್ತಮ ಕೊಯಿಲ ಮತ್ತಿತರರು ಇದ್ದರು.
ಟ್ರೋಫಿ ಗೆಲುವು:
ಒಟ್ಟು 65ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು, ರಾಯಿ ಶ್ರೀಗುರು ಕ್ರಿಕೆಟಸರ್್ ತಂಡ ಪ್ರಥಮ ಮತ್ತು ನಾಟೆಕಲ್ ಫ್ರೆಂಡ್ಸ್ ತಂಡ ದ್ವಿತೀಯ ಬಹುಮಾನ ಮತ್ತು ಟ್ರೋಫಿ ಗೆದ್ದುಕೊಂಡಿತು.