ಮಂಗಳೂರು, ಮಾ.20-ದಕ್ಷಿಣ ಕನ್ನಡ ಬಿಜೆಪಿ ಅಭ್ಯಥರ್ಿಯಾಗಿ ಹಾಲಿ ಸಂಸದ ನಳಿನ್ಕುಮಾರ್ ಕಟೀಲು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರವನ್ನು ಸರಳವಾಗಿ ಐದು ಜನರ ಬೆಂಬಲಿಗರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂರವರಿಗೆ ಸಲ್ಲಿಸಿದರು.

ನಳಿನ್ ಕುಮಾರ್ ಕಟೀಲ್ ಕಟೀಲಿನ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಅಸ್ರಣ್ಣರೆ ಆಶೀರ್ವಾದ ಪಡೆದರು
ನಳಿನ್ ಕುಮಾರ್ ಕಟೀಲ್ ಕಟೀಲಿನ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಅಸ್ರಣ್ಣರೆ ಆಶೀರ್ವಾದ ಪಡೆದರು
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಳಿಗ್ಗೆ ನಳಿನ್ಕುಮಾರ್ರವರು ತನ್ನ ಹುಟ್ಟೂರಿನ ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರಲ್ಲದೇ ಕ್ಷೇತ್ರದ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ ಹಾಗೂ ಅನಂತ ಪದ್ಮನಾಭ ಆಸ್ರಣ್ಣರ ಪಾದಮುಟ್ಟಿ ಆಶೀರ್ವಚನೆ ಪಡೆದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಹಾಜರಿದ್ದು ಅವರನ್ನು ಉದ್ದೇಶಿಸಿ ಮಾತನಾಡಿದರು.
ಮಾದ್ಯಮದೊಂದಿಗೆ ಪ್ರತಿಕ್ರಿಯಿಸಿದ ನಳಿನ್ಕುಮಾರ್ ಕಳೆದ ಐದು ವರ್ಷದ ಸಾಧನೆಯನ್ನು ಹಾಗೂ ಅಭಿವೃದ್ಧಿಗೆ ಶ್ರಮಿಸಿದ್ದನ್ನೇ ಎರಡನೆ ಬಾರಿ ಬಿಜೆಪಿ ಅಭ್ಯಥರ್ಿಯಾಗಿ ಜನರ ಮುಂದಿಟ್ಟಿದ್ದೇನೆ. ಅದೇ ಆಧಾರದಲ್ಲಿ ಈ ಬಾರಿ ಜನರ ಬಳಿಗೆ ತೆರಳಿ ಮತಯಾಚನೆ ನಡೆಸುತ್ತೇನೆ, ರಾಜ್ಯದಲ್ಲಿ ಅನುದಾನವನ್ನು ಬಳಸುವಲ್ಲಿ ಮೊದಲಿಗನಾಗಿದ್ದರು, ತನಗೆ ಪ್ರಚಾರ ಮುಖ್ಯವಲ್ಲ. ಅದನ್ನು ಪ್ರಚಾರಕ್ಕಾಗಿ ಮಾಡಿದ್ದಲ್ಲ ಬದಲಾಗಿ ಸಕಾರದ ಅನುದಾನವನ್ನು ಪ್ರಾಮಾಣಿಕವಾಗಿ ವಿನಿಯೋಗಿಸಿದ್ದ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು.
ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಬೆಲೆಕೊಡುವುದಿಲ್ಲ ಸೌಹಾರ್ದ ಸ್ಪಧರ್ೆಗೆ ನನ್ನ ಆದ್ಯತೆ, ಜನರು ಸಹ ಈ ಬಾರಿ ರಾಷ್ಟ್ರದ ಬಗ್ಗೆ ಚಿಂತನೆ ನಡೆಸುತ್ತಿರುವುದರಿಂದ ಈ ಅಪಪ್ರಚಾರಕ್ಕೆ ಕಿವಿಗೊಡುವುದಿಲ್ಲ, ಪ್ರತಿಯೊಬ್ಬರ ಮತದಾರನು ಸಹ ಚಿಂತನೆ ನಡೆಸಿಯೇ ಚುನಾಯಿಸುವುದರಿಂದ ಬಿಜೆಪಿ ಕಾರ್ಯಕರ್ತರ ಶ್ರಮ, ರಾಜ್ಯ, ರಾಷ್ಟ್ರನಾಯಕರ ವಿಶ್ವಾಸ, ಜನರ ಆಶೋತ್ತರಗಳಿಗೆ ಸ್ಪಂದನೆ ನೀಡುವ ಶಕ್ತಿ ನನ್ನಲಿದೆ ಇದೇ ಗೆಲುವಿನ ಶ್ರೀ ರಕ್ಷೆಯೂ ಆಗಲಿದೆ ಎಂದು ಹೇಳಿದರು.
ಸರಳವಾಗಿ ನಾಮಪತ್ರವನ್ನು ಸಲ್ಲಿಸಬೇಕು ಇದರಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಇಚ್ಚೆಯಿಂದ ಯಾವುದೇ ಅದ್ದೂರಿತನ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಮೂಡಿಬಂದಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಇಂದು ಕಾರ್ಯಕರ್ತರು ತಮ್ಮ ಧಾಮರ್ಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಮಾಡಿದ್ದಾರೆ. ಪ್ರಜಾಪ್ರಭುತ್ವದ ದೇಶದಲ್ಲಿ ಪ್ರತಿಯೊಬ್ಬನಿಗೆ ಸ್ಪಧರ್ಿಸುವ ಹಕ್ಕು ಇರಿವುದರಿಂದ ಆಮ್ ಆದ್ಮಿ ಹಾಗೂ ಪಕ್ಷೇತರರ ಬಗ್ಗೆ ತಲೆಕೆಡಿಸಿಕೊಂಡಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿಯನ್ನು ಕಾವೂರಿನಲ್ಲಿ ನಳಿನ್ಕುಮಾರ್ ಕಟೀಲು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣ ಪಾಲೆಮಾರ್, ರಾಮಚಂದ್ರ ಬೈಕಂಪಾಡಿ, ಶಾಸಕ ಎಸ್.ಅಂಗಾರ, ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ವಿಧಾನ ಪರಿಷತ್ತಿನ ಸದಸ್ಯರಾದ ಮೋನಪ್ಪ ಭಂಡಾರಿ, ಗಣೇಶ್ ಕಾಣರ್ಿಕ್, ಸ್ಥಳೀಯ ಬಿಜೆಪಿ ನಾಯಕರಾದ ಈಶ್ವರ ಕಟೀಲು, ಕೊಡೆತ್ತೂರು ಭುವನಾಭಿರಾಮ ಉಡುಪ, ಭಾಸ್ಕರ ದೇವಸ್ಯ, ಜಗನ್ನಾಥ ಶೆಟ್ಟಿ ಮಂಡ್ಯ, ದೇವಪ್ರಸಾದ ಪುನರೂರು, ಆದರ್ಶ ಶೆಟ್ಟಿ ಎಕ್ಕಾರು, ಜನಾರ್ದನ ಕಿಲೆಂಜೂರು, ದೇವಿಪ್ರಸಾದ ಶೆಟ್ಟಿ, ಕಸ್ತೂರಿ ಪಂಜ, ಶೈಲಾ ಶೆಟ್ಟಿ,
ಸರೋಜಿನಿ, ಗುರುರಾಜ್ ಕಟೀಲು, ಕೇಶವ ಕಕರ್ೇರಾ, ಅರುಣ್ಕುಮಾರ್, ಭಾಸ್ಕರ ಪೂಜಾರಿ, ಭುಜಂಗ ಶೆಟ್ಟಿ ಎಕ್ಕಾರು, ಬೇಬಿ ಸುಂದರ ಕೋಟ್ಯಾನ್ ಇನ್ನಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *