ಬಂಟ್ವಾಳ: ಅರಣ್ಯ ಜೀವಜಲದ ಉಗಮ ಸ್ಥಾನ. ಕಾಡು ಉಳಿದರೆ ಮಾತ್ರ ನಾಡು ಉಳಿಯಲು ಸಾಧ್ಯ. ಪ್ರಾಕೃತಿಕ ಅಸಮತೋಲನವೂ ಕೂಡ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು.
ಅವರು ಮಂಗಳವಾರ ತುಂಬೆ ವೆಂಟೆಡ್ ಡ್ಯಾಂನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆದ ಗಂಗಾಪೂಜೆ ಹಾಗೂ ನೇತ್ರಾವತಿ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪಶ್ಚಿಮ ವಾಹಿನಿ ಯೋಜನೆಯ ಮೂಲಕ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಮಹಾನಗರ ಪಾಲಿಕೆಗೆ ನೀರು ಒದಗಿಸುವ ಮಾದರಿಯಲ್ಲಿಯೇ ಗ್ರಾಮೀಣ ಭಾಗದ ಜನರಿಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ನದಿ ನೀರನ್ನು ಶುದ್ದಿಕರೀಸಿ ಪೂರೈಸುವ ಯೋಜನೆಗೆ ಬಂಟ್ವಾಳ ತಾಲೂಕಿನಲ್ಲಿ ಶಂಕು ಸ್ಥಾಪನೆ ನಡೆದಿದೆ ಎಂದರು.
Mayor pressmeet.2

ganga pooja at tumbe

ganga pooja at tumbe1

ganga pooja at tumbe2

ganga pooja at tumbe3

ganga pooja at tumbe4

ganga pooja at tumbe5
ಮಂಗಳೂರು ಶಾಸಕ ಜೆ.ಆರ್. ಲೋಬೋ ಬಾಗಿನ ಅರ್ಪಿಸಿ ಮಾತನಾಡಿ ಡ್ಯಾಂನಲ್ಲಿ ಸಾಕಷ್ಟು ನೀರಿನ ಶೇಖರಣೆ ಇದ್ದು ಈ ಬಾರಿ ಮಹಾನಗರದ ಜನತೆಗೆ ನೀರಿನ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು. ಹೊಸ ಡ್ಯಾಂ ನಿರ್ಮಾಣ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದೆ. ಎರಡು ಪಿಲ್ಲರ್‍ಗಳ ಅಡಿಪಾಯ ಆಗುತ್ತಿದ್ದು ಮೇ ತಿಂಗಳ ಅಂತ್ಯದೊಳಗೆ ಎಲ್ಲಾ ಆಧಾರ ಸ್ತಂಬಗಳ ಕೆಲಸ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ಇದೇ ಸಮಯಕ್ಕೆ ಹೊಸ ಡ್ಯಾಂನಲ್ಲಿ ನೀರು ಸಂಗ್ರಹಣೆ ಆರಂಭಗೊಳ್ಳುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಸಚೇತಕ ಶಶಿಧರ ಹೆಗ್ಡೆ, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ, ನಗರ ಯೋಜನೆ ಅಧ್ಯಕ್ಷ ಡಿ.ಕೆ.ಅಶೋಕ್, ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ಎಲ್.ರೊಡ್ರಿಗಸ್, ತುಂಬೆ ಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು, ಪಾಲಿಕೆ ಕಮಿಷನರ್ ಹೆಪ್ಸಿಬಾ ರಾಣಿ ಕಾರ್ಲೋಪತಿ, ಪಾಲಿಕೆ ಸದಸ್ಯರಾದ ಲ್ಯಾನ್ಸಿ, ಭಾಸ್ಕರ್ ಕೆ, ಲ್ಯಾನ್ಸಿ ಪಿಂಟೋ, ದೀಪಕ್ ಪೂಜಾರಿ, ಪ್ರತಿಭಾ, ಕು.ಅಪ್ಪಿ, ಶೈಲಜಾ, ರತಿಕಲಾ, ಲತೀಫ್, ಪ್ರಕಾಶ್, ರಜನೀಶ್, ಭಾಸ್ಕರ್ ಮೊೈಲಿ, ಕಮಲಾಕ್ಷ ಸಾಲ್ಯಾನ್, ನರೇಶ್ ಶೆಣೈ, ಶೀನ ಮೂಲ್ಯ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಹಾಜರಿದ್ದರು. ಮನಪಾ, ಎಎಂಆರ್ ಡ್ಯಾಂ ಹಾಗೂ ಕ.ನ.ನೀ.ಸ.ಒ.ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.
ರಾಜೇಶ್ ಸುವರ್ಣ ನಿರೂಪಿಸಿ, ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *