ಬಂಟ್ವಾಳ : ಸೂರತಾನಿ ಪ್ರೊವೆನ್ಸಿಯೆಲ್ ಸ್ಟೇಡಿಯಂ ನಲ್ಲಿ ನಡೆದ 20ನೇ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 60ರ ವಯೋಮಾನದ ಗುಂಪಿನಲ್ಲಿ ಭಾರತವನ್ನು ಪ್ರತಿನಿಧಿಸಿದ ಬಂಟ್ವಾಳ ಮೊಡಂಕಾಪು ನಿವಾಸಿ ಶಿಕ್ಷಕಿ ಗ್ಲಾಡಿಸ್ ಪಾಯ್ಸ್ ಇವರು ಎತ್ತರ ಜಿಗಿತದಲ್ಲಿ ಚಿನ್ನದ , ಹರ್ಡ್ಲ್ಸ್ ಮತ್ತು ತ್ರಿವಿಧ ಜಿಗಿತದಲ್ಲಿ ಬೆಳ್ಳಿಯ ಹಾಗೂ 1500ಮೀ. ಓಟದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ .


