ಬಂಟ್ವಾಳ : ಕಾರಾಜೆ ನೂರುಲ್ ಹುದಾ ಜುಮಾ ಮಸೀದಿಯ 12ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಮೂರು ದಿವಸಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಮಾ 20 ರಿಂದ 22 ರವರೆಗೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಮಾ 22 ರಂದು ಸಜಿಪ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ನೇತೃತ್ವದಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಉಜಿರೆ ಮಲ್ಜವುದ್ದಅ್ವತಿಲ್ ಇಸ್ಲಾಮಿಯ್ಯ ಚೆಯರ್ಮ್ಯಾನ್ ಸಯ್ಯಿದ್ ಅಲವೀ ಜಲಾಲುದ್ದೀನ್ ಅಲ್-ಹಾದಿ ತಂಙಳ್ ದುವಾಶಿರ್ವಚನಗೈಯುವರು. ಜಂ-ಇಯ್ಯತುಲ್ ಮುಅಲ್ಲಿಮೀನ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಹಾಜಿ ಎನ್.ಎ. ಅಬ್ದುಲ್ ರಹಿಮಾನ್ ಮದನಿ ಉದ್ಘಾಟಿಸುವರು. ಕಾರಾಜೆ ಮಸೀದಿ ಅಧ್ಯಕ್ಷ ಶೇಖಬ್ಬ ಹಾಜಿ ಅಧ್ಯಕ್ಷತೆ ವಹಿಸುವರು.
ಈ ಪ್ರಯುಕ್ತ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮುಹಮ್ಮದ್ ಸ್ವಾದಿಕ್ ಸಖಾಫಿ ನರಿಕ್ಕೋಡ್-ಕೇರಳ, ಬಿ.ಎಂ. ಮುಹಮ್ಮದ್ ರಶೀದ್ ಸಅದಿ ಬೋಳಿಯಾರು ಅವರು ಉಪನ್ಯಾಸಗೈಯುವರು ಎಂದು ಮಸೀದಿ ಪ್ರಕಟಣೆ ತಿಳಿಸಿವೆ.

By suddi9

Leave a Reply

Your email address will not be published. Required fields are marked *