ಬಂಟ್ವಾಳ : ವರ್ಷವಿಡೀ ದೈಹಿಕ ಚಟುವಟಿಕೆಯ ಹೊರತಾಗಿ ಕೇವಲ ಕೋರ್ಟ್ ಕಲಾಪಗಳಲ್ಲೇ ತಮ್ಮ ತಮ್ಮ ವ್ಯಾಜ್ಯಗಳದ್ದೇ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಮನಸ್ಸು ಭಾರವಾದಾಗ ಇಂತಹ ವಕೀಲರ ಸಂಘದ ಕ್ರೀಡಾಕೂಟದಿಂದಾಗಿ ವಕೀಲ ವಕೀಲರ ನಡುವೆ ಪ್ರೀತಿ ಭಾಂಧವ್ಯ ಹೆಚ್ಚಾಗಿ ವಕೀಲರ ಘನತೆ ಹೆಚ್ಚುತ್ತದೆ ಮತ್ತು ದೈಹಿಕವಾಗಿ ಆರೋಗ್ಯದಾಯಿಕವಾಗಿರುತ್ತಾರೆ ಎಂದು ಗೌ/ಪ್ರ/ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು . ಅವರು ಪಾಣೆಮಂಗಳೂರು ಶಾರದಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ವಕೀಲರ ಸಂಘದ ಆಶ್ರಯದಲ್ಲಿ ವಕೀಲರ ವಾರ್ಷಿಕ ಸೌಹಾರ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಗೌ/ಪ್ರ/ಸಿವಿಲ್ ನ್ಯಾಯಾಧೀ ಶರಾದ ಜಯಪ್ರಕಾಶ್ ಡಿ.ಆರ್ , ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಆರ್.ಮಹೇಶ್ , ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಮಾಜಿ ಅಧ್ಯಕ್ಷರಾದ ಸುರೇಶ್ ಪೂಜಾರಿ , ಅಶ್ವನಿ ಕುಮಾರ್ ರೈ , ಶ್ರೀಧರ ಪೈ , ಗಣೇಶಾನಂದ ಸೋಮಯಾಜಿ ಹಾಗೂ ಕ್ರೀಡಾ ಕಾರ್ಯದರ್ಶಿ ರೋಲ್ಫ್ ಅಲೆಕ್ಸ್ ಸಿಕ್ವೇರಾ ಉಪಸ್ಥಿತರಿದ್ದರು . ಕಾರ್ಯದರ್ಶಿ ಪುಂಚಮೆ ಚಂದ್ರಶೇಖರ ರಾವ್ ಸ್ವಾಗತಿಸಿದರು . ನ್ಯಾಯವಾದಿ ಗಣೇಶ್ ವಂದಿಸಿ , ನ್ಯಾಯವಾದಿ ಸುರೇಶ್ ಕುಮಾರ್ ನಾವೂರ್ ಕಾರ್ಯಕ್ರಮ ನಿರ್ವಹಿಸಿದರು.