ಬಂಟ್ವಾಳ: ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲಿನ ಹೊಳವೂರು ಸಮೀಪದ ಮನೆಯ ಬಾವಿಗೆ ಮಾ.18ರಂದು ಮುಂಜಾನೆ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ನಡೆದಿದೆ.


ಇಂದು ಬೆಳ್ಳಗ್ಗಿನ ಜಾವ ಕೋಳಿಯನ್ನು ಹಿಡಿಯಲು ಬಂದ ಚಿರತೆಯನ್ನು ಹೊಳವೂರು ಲಿಂಗಪ್ಪ ಅವರ ನಾಯಿ ಅಟ್ಟಿಸಿಕೊಂಡು ಹೋದಾಗ ಚಿರತೆ ಬಾವಿಗೆ ಬಿದ್ದಿದೆ. ಇದನ್ನು ಕಂಡ ಸ್ಥಳಿಯರು ಅರಣ್ಯ ಇಲಾಖಾಧಿಕಾರಿಗೆ ಸುದ್ದಿ ಮುಟ್ಟಿಸಿದರು. ಕೂಡಲೇ ಅರಣ್ಯ ಇಲಾಕಾಧಿಖಾರಿಗಳು ಅಗ್ನಿ ಶಾಮಕ ದಳದವರು ಬಂಟ್ವಾಳ ಪೋಲಿಸ್ ಅಧಿಕಾರಿಗಳು ಸ್ಥಳಕೆ ಆಗಮಿಸಿ ನಂತರ ಬಲೆ ಹಾಕಿ ಚಿರತೆಯನ್ನು ಮೇಲಕ್ಕೆತ್ತಿದರು.



