ಉಳ್ಳಾಲ: ಸೇತುವೆ ನೋಡಲು ತೆರಳಿದ್ದ ಮಂಗಳೂರಿನ ಕೆನರಾ ಪಿಯುಸಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನೇತ್ರಾವತಿ ನದಿ ನೀರಿನಲ್ಲಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿ ಸಂಭವಿಸಿದೆ. ಮಾರ್ಗನ್ಸ್‍ಗೇಟ್ ಮಹಾಂಕಾಳಿಪಡ್ಪು ನಿವಾಸಿ ವಿನೋದ್ ನಾಯಕ್ ಎಂಬವರ ಪುತ್ರ ಆದಿತ್ಯ ನಾಯಕ್ (17) ಮತ್ತು ಮಾರ್ನಮಿಕಟ್ಟೆ ನಿವಾಸಿ ಯೋಗೇಂದ್ರ ಎಂಬವರ ಪುತ್ರ ಚಿರಾಗ್ ಬಂಗೇರ ನಾಪತ್ತೆಯಾದವರು. ಇಬ್ಬರು ಮಂಗಳೂರಿನ ಕೆನರಾ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ.

canara

ullal  (1)

ullal  (2)

ullal  (3)

ullal  (4)

ullal  (5)

ullal  (6)

ullal  (7)

ullal  (8)

ullal  (9)

ullal  (10)
ಘಟನೆ ವಿವರ: ಸೋಮವಾರ ನಡೆಯಲಿರುವ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ತಯಾರಿಯಲ್ಲಿದ್ದ ಸ್ನೇಹಿತರಾದ ಆದಿತ್ಯ ನಾಯಕ್, ಚಿರಾಗ್ ಬಂಗೇರ, ಸಾತ್ವಿಕ್, ಪ್ರತೀಕ್ ಇಮಾನ್ಯುವೆಲ್ ಮಂಗಳೂರಿಗೆ ಬಂದಿದ್ದರು. ವಿದ್ಯಾರ್ಥಿ ಸಾತ್ವಿಕ್‍ಗೆ ನೋಟ್ಸ್‍ನ ಜೆರಾಕ್ಸ್ ಬೇಕಿದ್ದರಿಂದ ಮುಡಿಪುವಿನಂದ ಮಂಗಳೂರಿಗೆ ಬಂದಿದ್ದ ಆತನನ್ನು ಇತರ ಗೆಳೆಯರು ಭೇಟಿಯಾಗಿದ್ದರು. ಅಲ್ಲಿಂದ ಎಲ್ಲರೂ ಜತೆಯಾಗಿ ಮಹಾಂಕಾಳಿಪಟ್ಪು ಆದಿತ್ಯನ ಮನೆಗೆ ಜತೆಯಾಗಿ ಓದಲು ಸೇರಿದ್ದರು. ಅಲ್ಲಿಂದ ಮತ್ತೆ ನೇತ್ರಾವತಿ ಕಲ್ಲಾಪು ಸಮೀಪ ಕಿರುಸೇತುವೆ ಇದ್ದು, ಅಲ್ಲಿಯೇ ಓದೋಣ ಎಂದು ಮಹಾಂಕಾಳಿಪಟ್ಪುವಿನಿಂದ ರೈಲ್ವೇ ಹಳಿಯ ಮೂಲಕ ಕಲ್ಲಾಪು ನೇತ್ರಾವತಿ ಕಿನಾರೆಗೆ ಬಂದಿದ್ದರು. ಅಲ್ಲಿರುವ ತಾತ್ಕಾಲಿಕ ಕಿರು ಸೇತುವೆ ಸಮೀಪ ಆದಿತ್ಯ ಮತ್ತು ಚಿರಾಗ್ ಈಜಲು ಗೊತ್ತಿದ್ದರಿಂದ ನದಿ ನೀರಿನಲ್ಲಿ ಸ್ನಾನಕ್ಕ ಇಳಿದಿದ್ದರು. ಆದರೆ ಮಧ್ಯಾಹ್ನ ಹೊತ್ತಾಗಿದ್ದರಿಂದ ನದಿ ನೀರಿನ ಉಬ್ಬರ ಜಾಸ್ತಿಯಿದ್ದರಿಂದ ಇಬ್ಬರೂ ನೀರಿನ ಸೆಳೆತಕ್ಕೆ ಈಜಲು ಸಾಧ್ಯವಾಗದೆ ನಾಪತ್ತೆಯಾಗಿದ್ದಾರೆ. ಇವರು ಮುಳುಗುತ್ತಿರುವುದನ್ನು ಕಂಡ ಪ್ರತೀಕ್ ಕೂಗಾಡಿದರೂ ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ರಕ್ಷಿಸಲು ಅಸಾಧ್ಯವಾಯಿತು. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಸೋಮವಾರದಂದು ನಡೆಯಲಿರುವ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ತಯಾರಿಯಲ್ಲಿದ್ದರು.

 

By suddi9

Leave a Reply

Your email address will not be published. Required fields are marked *