ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಸೋಮವಾರ ಆರಂಭಗೊಂಡ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಗೆ 3,631 ಬಾಲಕರು ಮತ್ತು 3,117 ಬಾಲಕಿಯರು ಸೇರಿದಂತೆ ಒಟ್ಟು 6,748 ಮಂದಿ ವಿದ್ಯಾರ್ಥಿಗಳ ಪೈಕಿ 148 ಮಂದಿ ಗೈರು ಹಾಜರಾಗಿದ್ದಾರೆ. ಈ ಪೈಕಿ ಕನ್ನಡ ವಿಷಯದಲ್ಲಿ 146 ಮತ್ತು ಸಂಸ್ಕೃತ ವಿಷಯದಲ್ಲಿ ಇಬ್ಬರು ಗೈರು ಹಾಜರಾಗಿದ್ದಾರೆ.
ಶಾಲಾ ಅಭ್ಯರ್ಥಿಗಳು ಒಟ್ಟು 6,091, ಪುನರಾವತಿ ಅಭ್ಯರ್ಥಿಗಳು 401, ಖಾಸಗಿ ಅಭ್ಯರ್ಥಿಗಳು 95, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 161 ಹೆಸರು ನೊಂದಾಯಿಸಿದ್ದರು.
ಒಟ್ಟು 6,748 ಮಂದಿ ಪೈಕಿ 148 ಮಂದಿ ವಿದ್ಯಾರ್ಥಿಗಳು ಗೈರು

ಬಂಟ್ವಾಳ ಎಸ್ವಿಎಸ್ ಪ್ರೌಢಶಾಲೆ ಸೇರಿದಂತೆ ಪಾಣೆಮಂಗಳೂರು ಶಾರದಾ ಪ್ರೌಢಶಾಲೆ ಮತ್ತು ಎಸ್ಎಲ್ಎನ್ಪಿ ಪ್ರೌಢಶಾಲೆ, ಮೊಡಂಕಾಪು ದೀಪಿಕಾ ಪ್ರೌಢಶಾಲೆ ಮತ್ತು ಕಾಮ್ರಲ್ ಬಾಲಕಿಯರ ಪ್ರೌಢಶಾಲೆ, ವಿಟ್ಲ ಪದವಿಪೂರ್ವ ಕಾಲೇಜು, ಅಳಿಕೆ ಸತ್ಯಸಾಯಿ ಪ್ರೌಢಶಾಲೆ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ವಾಮದಪದವು ಮತ್ತು ಕುರ್ನಾಡು ಸರ್ಕಾರಿ ಪದವಿಪೂರ್ವ ಕಾಲೇಜು, ಮಾಣಿ ಕರ್ನಾಟಕ ಪ್ರೌಢಶಾಲೆ, ತುಂಬೆ ಪದವಿಪೂರ್ವ ಕಾಲೇಜು, ವಗ್ಗ, ಕನ್ಯಾನ, ಮೊಂಟೆಪದವು ಸರ್ಕಾರಿ ಪದವಿಪೂರ್ವ ಕಾಲೇಜು ಹೀಗೆ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಪರೀಕ್ಷೆ ಆರಂಭಗೊಂಡಿದೆ.
ನಿಷೇದಾಜ್ಞೆ:
ತಾಲ್ಲೂಕಿನಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಪರೀಕ್ಷಾ ಕೇಂದ್ರಗಳ ಬಳಿ 200 ಮೀಟರ್ ವ್ಯಾಪ್ತಿಯಲ್ಲಿ ಇದೇ 30ರಿಂದ ಎ.13ರ ತನಕ ಜಿಲ್ಲಾಧಿಕಾರಿಗಳ ಆದೇಶದಂತೆ ಸೆಕ್ಷನ್ 144 ನಿಷೇದಾಜ್ಞೆ ಜಾರಿಗೊಳಿಸಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.