ಮೂಡುಬಿದಿರೆ: 50-54ನೇ ಎಸ್‍ಸಿಪಿ ಯೋಜನೆಯಡಿ 10 ಲಕ್ಷ ರೂ ವೆಚ್ಚದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಕಜೆಗೆ ಪರಿಶಿಷ್ಟ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆಯನ್ನು ಸಚಿವ ಅಭಯಚಂದ್ರ ಜೈನ್ ಗುರುವಾರ ಉದ್ಘಾಟಿಸಿದರು.
16 mood basavanakaje
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು ಎಸ್‍ಸಿ ಎಸ್‍ಟಿ ಕಾಲನಿಗಳ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲು ಈ ವರ್ಷ ಎಸ್‍ಸಿಪಿ ಯೋಜನೆಯಲ್ಲಿ 10 ಲಕ್ಷದಲ್ಲಿ ಪಿಡಬ್ಲ್ಯೂ ಮೂಲಕ ಇಡೀ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗುವುದು. ಈಗಾಗಲೇ ಪಿಡಬ್ಲ್ಯೂ ಮುಖಾಂತರ 80ಲಕ್ಷದಲ್ಲಿ 10 ರಸ್ತೆಗಳ ಕಾಂಕ್ರೀಟಿಕರಣ ಮುಗಿಸಲಾಗಿದೆ. 1 ಕೋಟಿಯಲ್ಲಿ ಜಿ.ಪಂ ಮೂಲಕ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಸರ್ಕಾರದ ವಿಶೇಷ ಅನುದಾನ 2 ಕೋಟಿ ರೂವಿನಲ್ಲಿ ಮೂಡುಬಿದಿರೆ ವ್ಯಾಪ್ತಿಯ ಕೆಲವು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, 2015-16ರ ವಿಶೇಷ ಅನುದಾನದಲ್ಲಿ ಎಸ್‍ಸಿ ಎಸ್‍ಟಿ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಮೂಡುಬಿದಿರೆಗೆ 5 ಕೋಟಿ ರೂವನ್ನು ನೀಡುವ ಭರವಸೆಯನ್ನು ಸಮಾಜ ಕಲ್ಯಾಣ ಸಚಿವ ಆಂಜನೇಯ ನೀಡಿದ್ದಾರೆಂದು ತಿಳಿಸಿದರು.
ತಾ.ಪಂ ಅಧ್ಯಕ್ಷೆ ರಜನಿ, ಮೂಡುಬಿದಿರೆ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಪಿ.ಕೆ.ಥೋಮಸ್, ಭೂ ನ್ಯಾಯ ಮಂಡಳಿ ಸಮಿತಿಯ ಸದಸ್ಯ ಮಹಮ್ಮದ್ ಅಸ್ಲಾಂ, ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷೆ ಸಂಜೀವಿ, ಉಪಾಧ್ಯಕ್ಷ ಸತೀಶ್ ಕರ್ಕೆರಾ, ಸದಸ್ಯರುಗಳಾದ ಸೂರಜ್ ಬನ್ನಡ್ಕ, ರಮೇಶ್ ಶೆಟ್ಟಿ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *