ಬಂಟ್ವಾಳ: ಮಂಗಳೂರು-ಧರ್ಮಸ್ಥಳ ರೂಟಿನಲ್ಲಿ ತಾಸುಗಟ್ಟಲೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಸುಳಿವು ಇಲ್ಲದಿದ್ದುದರಿಂದ ಕಾದು, ಕಾದು ಸುಸ್ತಾದ ಪ್ರಯಾಣಿಕರು ಬಸ್ಸೊಂದನ್ನು ಕೆಲವು ಹೊತ್ತುಗಳ ಕಾಲ ತಡೆಹಿಡಿದು ಹಠಾತ್ ಪ್ರತಿಭಟಿಸಿದ ಘಟನೆ ಗುರುವಾರ ರಾತ್ರಿ ಬಿ.ಸಿರೋಡು ಬಸ್ಸು ನಿಲ್ದಾಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕನಿಷ್ಠ ಸೌಜನ್ಯಕ್ಕಾದರೂ ಸ್ಪಂದಿಸದೆ ಬೇಜಾವಾಬ್ದಾರಿಯುತವಾಗಿ ವತರ್ಿಸಿದ ಇಲ್ಲಿನ ಡಿ.ಸಿ ಪಾಯಿಂಟ್ನ ನಿಯಂತ್ರಣಾಧಿಕಾರಿಯನ್ನು ಆಕ್ರೋಶಿತ ಪ್ರಯಾಣಿಕರು ವಾಚಮಾಗೋಚರವಾಗಿ ಬೈದು ನೇರ ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.
ಸುದ್ಧಿ ತಿಳಿದು ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣೆಯ ಹೆಡ್ಕಾನ್ಸ್ಟೇಬಲೊಬ್ಬರು ಪ್ರತಿಭಟನಾಕಾರರನ್ನು ಬಲವಂತವಾಗಿ ಬದಿಗೆ ಸರಿಸಿ ತಡೆ ಹಿಡಿಯಲ್ಪಟ್ಟ ಧರ್ಮಸ್ಥಳ ರೂಟಿನ ಬಸ್ಸನ್ನು ತೆರಳಲು ಅನುವು ಮಾಡಿ ಕೊಟ್ಟರು. ಇದೇ ಹೆಡ್ಕಾನ್ಸ್ಟೇಬಲ್ ಕೆಎಸ್ ಆರ್ ಟಿ ಸಿ ನಿಯಂತ್ರಣಾಧಿಕಾರಿಯ ಜತೆ ಮಾತುಕತೆ ನಡೆಸಿ ಪ್ರಯಾಣಿಕರಿಗೆ ತೆರಳಲು ಸ್ಥಳೀಯ ಡಿಪೋ ದಿಂದ ಬಸ್ಸಿ ವ್ಯವಸ್ಥೆ ಕಲ್ಪಿಸುವ ಬದಲು ಪುಕ್ಕಟೆ ಸಲಹೆ ನೀಡಿ ಬಂದಪುಟ್ಟ.. ಹೋದಪುಟ್ಟನಂತೆ ವತರ್ಿಸಿದ್ದು ಪ್ರಯಾಣಿಕರನ್ನು ಮತ್ತಷ್ಟು ಕೆರಳಿಸಿತು.

ಸುಮಾರು 7.30ರ ಹೊತ್ತಿಗೆ ಮಂಗಳೂರು ಕಡೆಯಿಂದ ಬಂದ ಧರ್ಮಸ್ಥಳ ರೂಟಿನ ಬಸ್ಸಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರು ತುಂಬಿದ್ದರಿಂದ ಇದರಲ್ಲಿ ಸಂಚರಿಸಲು ಸಾದ್ಯವಾಗದೆ ಬಹುತೇಕ ಮಂದಿ ಬಿಸಿರೋಡಿನಲ್ಲೇ ಉಳಿಯಬೇಕಾಯಿತು. ಆದರೆ ನಂತರ ಬರಬೇಕಾದ ಈ ರೂಟಿನ ಮೂರ್ನಾಲ್ಕು ಬಸ್ಸುಗಳು ಬಾರದೆ ಕೈಕೊಟ್ಟಿತು. ಸುಮಾರು 9.30ರ ಹೊತ್ತಿಗೆ ಬಂದ ಧರ್ಮಸ್ಥಳ ಬಸ್ಸಿನಲ್ಲೂ ಪ್ರಯಾಣಿಕರು ತುಂಬಿತುಳುಕಿದ್ದರು. ಇದರಲ್ಲೂ ತೆರಳಲು ಸಾದ್ಯವಾಗದೆ ಉಳಿದಿದ್ದ ಸುಮಾರು ಒಂದು ಬಸ್ಸಿನಷ್ಟು ಪ್ರಯಾಣಿಕರು ಸಂಸ್ಥೆಯ ಅವ್ಯವಸ್ಥೆಗೆ ಛೀಮಾರಿ ಹಾಕಿ ಈ ಬಸ್ಸು ತಡೆದು ಹಠಾತ್ತನೆ ಪ್ರತಿಭಟನೆ ನಡೆಸಿದರು.
ಈ ಹಿಂದೆಯು ಮೂರ್ನಾಲ್ಕು ಬಾರಿ ಇದೇ ರೀತಿ ಬಸ್ಸ್ ತಡೆದು ಪ್ರತಿಭಟನೆ ನಡೆಸಿದರೂ ಕೆಎಸ್ ಆರ್ ಟಿ ಸಿ ಅಧಿಕಾರಿಗಳು ಈ ರೂಟಿನ ಪ್ರಯಾಣಿಕರ ಸಹನೆಯನ್ನು ಪರೀಕ್ಷಿಸುತ್ತಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನಾದರೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಹೆದ್ದಾರಿಯಲ್ಲಿ ಬಸ್ಸು ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಈ ಮೂಲಕ ಪ್ರಯಾಣಿಕರು ನೀಡಿದ್ದಾರೆ.
ಸಿಬ್ಬಂದಿ ಕೊರತೆ ; ಧರ್ಮಸ್ಥಳ ರೂಟಿನ ಬಸ್ಸಿನಲ್ಲಿ ಚಾಲಕ, ನಿವರ್ಾಹಕರ ಕೊರತೆಯನ್ನು ಎದುರಿಸುತ್ತಿದೆ. ಹೊರಜಿಲ್ಲೆಯ ಚಾಲಕ, ನಿ ಹಕರೇ ಇಲ್ಲಿ ಕಾರ್ಯನಿರ್ವಹಿಸುವುದರಿಂದ ಇವರು ಒಮ್ಮೆ ರಜೆ ಹಾಕಿ ತೆರಳಿದ್ದರಿಂದ ವಾರಗಳ ಕಾಲ ಇತ್ತ ಸುಳಿಯುತ್ತಿಲ್ಲ. ಪರಿಣಾಮ ಇಲ್ಲಿ ಬಸ್ಸು ಓಡಾಟದ ಸಮಸ್ಯೆ ಉಂಟಾಗುತ್ತಿದೆಯೆಂದು ಕೆಎಸ್ ಆರ್ ಟಿಸಿ ಅಧಿಕಾರಿಗಳ ಸಮರ್ಥನೆಯಾಗಿದೆ.
ಸಿಸಿ ಬಸ್ಸಿಗೆ ಬೇಡಿಕೆ : ಧರ್ಮಸ್ಥಳ ರೂಟಿನಲ್ಲಿ ಕೆಎಸ್ ಆರ್ ಟಿಸಿಯ ಅಸಮರ್ಪಕ ಸೇವೆಯಿಂದ ಬೇಸತ್ತ ಪ್ರಯಾಣಿಕರು ಈ ರೂಟಿನಲ್ಲಿ ಸಿಸಿ ಬಸ್ಸುಗಳ ಓಡಾಟಕ್ಕೆ ಬೇಡಿಕೆ ಇಟ್ಟಿದ್ದಾರೆ.ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ, ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡುವಂತೆ ಈ ರೂಟಿನ ಪ್ರಯಾಣಿಕರು ಒತ್ತಾಯಿಸಿದ್ದಾರೆ