ಪುಂಜಾಲಕಟ್ಟೆ : ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರವ ಆದ್ಯಾತ್ಮಿಕ ಸಂಗಮ 12ನೇ ಜಲಾಲಿಯ್ಯ ಝಿಕ್ರ್ ಮಜ್ಲಿಸ್, ತಾಜುಲ್ ಉಲಮ ಮತ್ತು ನೂರುಲ್ ಉಲಮಾ (ನ.ಮ) ರವರ ಅನುಸ್ಮರಣೆ ಹಾಗೂ ಬುರ್ದಾ ಮಜ್ಲಿಸ್ ದಿನಾಂಕ 22ನೇ ಎಪ್ರಿಲ್ ಬಂಧವಾರ ಸಂಜೆ 5.30 ರಿಂದ ಪ್ರಾರಂಭಗೊಳ್ಳಲಿಕ್ಕಿದ್ದು ಸುಮರು 20 ಸಾವಿರ ಜನರು ದೇಶ ವಿದೇಶಗಳಿಂದ ಸೇರಲಿಕ್ಕಿರುವರು. ಜಲಾಲಿಯ್ಯ ಮಜ್ಲಿಸ್‍ನ ನೇತ್ರತ್ವಹಾಗೂ ಅಧ್ಯಕ್ಷತೆಯನ್ನು ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ವಹಿಸುವರು. ಉಳ್ಲಾಲ ಖಾಝಿಯವರಾದ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ವಿಶೇಷ ಪ್ರಾಥನೆಯೊಂದಿಗೆ, ಉಡುಪಿ ಜಿಲ್ಲಾ ಖಾಝಿಯವರಾದ ಶೈಖುನಾ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲರವರು ಉದ್ಘಾಟಿಸಲಿರುವರು. ಈ ಮಜ್ಲಿಸ್‍ನ ಕೇಂದ್ರ ಬಿಂದು ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ರವರು ಮುಖ್ಯ ಭಾಷಣಗೈಯಲಿದ್ದು, ಕಾರವಾರದ ಖಾಝಿಯವರಾದ ಮೌಲಾನ ಮುಫ್ತಿ ಇಷ್ತಿಯಾಖ್ ಅಹ್ಮದ್ ಖಾದರಿ ಯವರು ಉರ್ದುವಿನಲ್ಲಿ ಮತ್ತು ಮಾಜಿ ಕೇಂದ್ರ ಸಚಿವರು ಜನಾಬ್ ಸಿ.ಎಂ.ಇಬ್ರಾಹಿಂ ರವರು ಕನ್ನಡದಲ್ಲಿ ಭಾಷಣ ಮಾಡುವರು. ಈ ಮಜ್ಲಿಸ್‍ನಲ್ಲಿ ಅಸ್ಸಯ್ಯದ್ ಉಮರುಲ್ ಫಾರೂಕ್ ತಂಙಳ್ ಪೋಸೋಟು, ಶೈಖುನಾ ಅಲಿಕುಂಞ ಮಸ್ಲಿಯಾರ್,ಶಿರಿಯ, ಮಾಣಿ ಅಲ್ಹಾಜ್ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್, ಮಲ್‍ಜಅ ತಂಙಳ್, ಉಜಿರೆ ತಂಙಳ್, ಕಾಜೂರ್ ತಂಙಳ್, ಮಂಜನಾಡಿ ಉಸ್ತಾದ್ ಸೈಯ್ಯದ್ ಜಫರ್ ಸ್ವಾದಿಖ್ ತಂಙಳ್ ಕುಂಬೋಳ್, ಸಾದಾತ್ ತಂಙಳ್, ಅಲ್‍ಹಾದಿ ತಂಙಳ್ ಉಜಿರೆ, ಕೋಟೇಶ್ವರ ತಂಙಳ್, ಮನ್‍ಶರ್ ತಂಙಳ್, ಉಳ್ತೂರು ತಂಙಳ್, ಮುರ ತಂಙಳ್, ಕೊಟೆಬಾಗಿಲು ಮುಫ್ತಿ ಮತ್ತು ಅನೇಕ ಉಲಮಾ, ಉಮರಾ, ಸಾದಾತ್ ಗಳು ಉಪಸ್ಥಿತರಿರುವರು. ರಾಜ್ಯದ ಅರಣ್ಯ ಸಚಿವರಾದ ಶ್ರೀ.ಬಿ.ರಮಾನಾಥ ರೈ, ಆರೋಗ್ಯ ಸಚಿವರಾದ ಜನಾಬ್ ಯು.ಟಿ.ಖಾದರ್ ಮತ್ತು ಜಿಲ್ಲಾವಕ್ಯ್ ಸಲಹಾ ಸಮಿತಿಯ ಅಧ್ಯಕ್ಷರಾದ. ಎಸ್.ಎಂ. ರಶೀದ್ ರವರು ಭಾಗವಹಿಸುವರು. ಕಾರ್ಯಕ್ರಮವು ಕ್ಲಪ್ತ ಸಮಯದಲ್ಲಿ ಪ್ರಾರಂಭವಾಗಲಿಕ್ಕಿದ್ದು ಎಲ್ಲರು ಇದರ ಪ್ರಯೋಜನ ಪಡೆದು ಕೊಳ್ಳಬೇಕಂದು ಸಂಘಟರು, ಮಜ್ಲಿಸ್‍ನ ರುವಾರಿಗಳಾದ ಮೌಲಾನಾ ಡಾ| ಮುಹಮ್ಮದ್ ಫಾಝಿಲ್ ರಝ್ವಿ, ಕಾವಳಕಟ್ಟೆ ಹಝ್ರತ್ ರವರು ತಿಳಿಸಿರುತ್ತಾರೆ.