ಬಂಟ್ವಾಳ : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.7ಲಕ್ಷ ವೆಚ್ಚದ ತುಂಬೆ ಗ್ರಾಮದ ಪೆರ್ಲಬೈಲ್ ಕಾಂಕ್ರಿಟೀಕೃತ ರಸ್ತೆಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ , ರಾಜ್ಯ ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಅಮೀರ್ ಅಹ್ಮದ್ ತುಂಬೆ ,ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೆರಾ, ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ , ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ಇಂಜಿನಿಯರ್ ಕೃಷ್ಣ , ನಿಸಾರ್ ಅಹ್ಮದ್, ಗೋಪಾಲ್ಕೃಷ್ಣ ತುಂಬೆ, ದೇವದಾಸ್ ತುಂಬೆ, ಪ್ರವೀಣ್ ಕೊಟ್ಟಿಂಜ , ಗಣೇಶ್ ಸಾಲಿಯಾನ್, ಕೇಶವ ದೋಟ, ಪ್ರಭಾಕರ್, ಇಮ್ತಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
