ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ ಮಂಗಳವಾರ ನಡೆದ ಅಭಿವೃದ್ಧಿ ಅಧಿಕಾರಿ ಮಧ್ವರಾಜ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವಾರ್ಷಿಕ ಸಮಾವೇಶದಲ್ಲಿ ಹಿರಿಯ ಪ್ರತಿನಿಧಿ ಮಹಾಬಲ ಆಳ್ವ ಇವರನ್ನು ಸನ್ಮಾನಿಸಲಾಯಿತು.
ಶಾಖಾಧಿಕಾರಿ ಸಿ.ಚಂದ್ರು, ಪ್ರಮುಖರಾದ ಆರ್.ಕೆ.ಹೆಗ್ಡೆ, ಲೋಕೇಶ ಶೆಟ್ಟಿ, ದಯಾನಂದ ಶೆಟ್ಟಿ, ದಿನಕರ ಮುಡಿಪು ಮತ್ತಿತರರು ಇದ್ದರು.
