ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಬಸವ ವಸತಿ ಯೋಜನೆಯಡಿ ಹೆಚ್ಚುವರಿ 300 ವಸತಿ ಮಂಜೂರಾಗಿದ್ದು, ಗ್ರಾಮಸಭೆಯಲ್ಲಿ ಅರ್ಹಫಲಾನುಭವಿಗಳನ್ನು ಗುರುತಿಸುವಕೆಲಸ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯಿತಿಗೆ ಮಂಗಳವಾರ ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಗರಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಇದೇ ವೇಳೆ ಸಾರ್ವಜನಿಕರ ಪರವಾಗಿ ರಾಜೇಂದ್ರ ಕೆ.ವಿ. ಅವರು ಸಚಿವರಿಗೆ ವಿವಿಧ ಬೇಡಿಕೆ ಸಲ್ಲಿಸಿದರು. ದುಗಮಾರುಗುಡ್ಡೆ- ಕಾಡಬೆಟ್ಟು ಸಂಪರ್ಕ ರಸ್ತೆ , ದೈಕಿನಕಟ್ಟೆ-ಪೆÇರಿಮೇಲು ರಸ್ತೆ , ದೈಕಿನಕಟ್ಟೆ-ನಿನ್ಯಾರು ರಸ್ತೆ , ಕುತ್ತಿಲ-ಕಂಚಿನೋಡಿ ರಸ್ತೆ , ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ -ಮಂಚಗುಡ್ಡೆ ರಸ್ತೆ , ಪರಿಶಿಷ್ಟ ಕಾಲೊನಿ ರಸ್ತೆ , ನಯನಾಡು – ಕಲ್ಲಬೆಟ್ಟು ರಸ್ತೆಗಳ ಅಭಿವೃದ್ಧಿ , ನಯನಾಡು – ಪೆಲತ್ತಕಟ್ಟೆ ಸಂಪರ್ಕ ರಸ್ತೆ ನಿರ್ಮಾಣ, ಕಲ್ಲುಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಮುದಾಯ ಭವನ ನಿರ್ಮಾಣ, ಪಿಲಾತಬೆಟ್ಟು ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಬೇಕು. ಮೂರ್ಜೆ ಮತ್ತು ನಯನಾಡು ಪೇಟೆಯಲ್ಲಿ ಹೈಮಾಸ್ಟ್ ದೀಪ ಅಳವಡಿಕೆ, ನಯನಾಡಿಗೆ ಸಾರ್ವಜನಿಕ ಬೋರ್ವೆಲ್ ನಿರ್ಮಾಣ ಮತ್ತಿತರ ಮನವಿ ಸಲ್ಲಿಸಿದರು.
ತಾ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ರಮೇಶ್ ಕುಡುಮೇರು, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಕಾರಿಂಜ ಕ್ಷೇತ್ರದ ಮಾಜಿ ಅಡಳಿತ ಧರ್ಮದರ್ಶಿ ಪಿ.ಜಿನರಾಜ ಆರಿಗ, ಜಿ.ಪಂ.ಇಂಜಿನಿಯರಿಂಗ್ ವಿಭಾಗ ಇಂಜಿನಿಯರ್ ಕೃಷ್ಣ , ಬಿ.ಎಚ್.ಖಾದರ್, ಗ್ರಾಮಕರಣಿಕ ಕುಮಾರ್ ಮತ್ತಿತರರು ಇದ್ದರು. ಪಿಡಿಒ ಧರ್ಮಪಾಲ ಪೂಜಾರಿ ಸ್ವಾಗತಿಸಿ, ವಂದಿಸಿದರು.