ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ವಿವಿಧ ಜನಪರ ಚಳುವಳಿಗಳ ನೇತಾರ ಡಾ.ಅಮ್ಮೆಂಬಳ ಬಾಳಪ್ಪ ಅವರು ಅಸ್ತಂಗತರಾಗಿ ಇಂದಿಗೆ ವರುಷ ಒಂದು ಸಂದರೂ ಅವರ ನೆನಪು ಅಮ್ಮೆಂಬಳ ಅಭಿಮಾನಿ ವಲಯದಲ್ಲಿ ಇಂದಿಗೂ ಹಚ್ಚಹಿಸಿರು. ಜೀವನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ತನ್ನದೆಲ್ಲವನ್ನೂ ಅದಕ್ಕಾಗಿಯೇ ತ್ಯಾಗಮಾಡಿದ ತ್ಯಾಗಮಯಿ, ಹತ್ತು ಹಲವು ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಆದರ್ಶರಾಗಿದ್ದ ಬಾಳಪ್ಪರ ಬದುಕು ನಿಜಕ್ಕೂ ಇಂದಿಗೂ ನೆನೆಯುವಂತದ್ದು. ಅವರ ನಡೆ, ನುಡಿ, ಸಂದೇಶ, ಸಾಧನೆಗಳೆಲ್ಲವೂ ಎಂದೆಂದಿಗೂ ಪ್ರಸ್ತುತವಾದದ್ದು.

15b-Ammembala Balappa

ಕಳೆದ 2014ರ ಸುಮಾರಿಗೆ ಬಾಳಪ್ಪ ಅವರಿಗೆ 93 ರ ಹರೆಯ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು 2014ರ ಮಾ.1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯದಲ್ಲಿ ಮತ್ತೆ ಚೇತರಿಕೆ ಕಾಣದ ಅವರು 15-5-2014ರಂದು ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದರು. ಈ ಮೂಲಕ ದ.ಕ.ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸಾಲಿನ ಬಹುದೊಡ್ಡ ಹೆಸರೊಂದು ಇತಿಹಾಸದ ಪುಟಕ್ಕೆ ಸೇರಿತ್ತು.
ಮೂಲತಃ ಅಮ್ಮೆಂಬಳದವರಾದ ಬಾಳಪ್ಪ ನಾಲ್ಕು ದಶಕಗಳಿಂದ ಸಜೀಪಮುನ್ನೂರು ಗ್ರಾಮದ ನಾಗನವಳಚ್ಚಿನಲ್ಲಿರುವ ಪುಟ್ಟ ಋಷಿ ಆಶ್ರಮದಂತಿರುವ ‘ಅಹಿಂಸಾ’ ಮನೆಯಲ್ಲಿ ತಮ್ಮ ಜನಾರ್ಧನ ಅವರೊಂದಿಗೆ ವಾಸವಾಗಿದ್ದರು. ಬ್ರಹ್ಮಚಾರಿಯಾಗಿದ್ದ ಬಾಳಪ್ಪ ಅವರು ಅಪ್ಪಟ ಗಾಂಧಿವಾದಿಯಾಗಿ, ಸರಳ ಜೀವಿಯಾಗಿ, ಖಾದಿ ಬಟ್ಟೆಧಾರಿಯಾಗಿಯೇ ತನ್ನ ಜೀವನವನ್ನು ಕಳೆದಿದ್ದರು. ಎಂದಿಗೂ ಅವರು ಐಶಾರಾಮದ ಬದುಕನ್ನು ಅನುಭವಿಸಿದವರಲ್ಲ, ಅದನ್ನು ಬಯಸಿದವರೂ ಅಲ್ಲ. ಅವರ ಸೇವೆಯೂ ಅಂತದ್ದೇ. ಅದರಲ್ಲಿ ಸ್ವಾರ್ಥದ ಲೇಪವಿರಲಿಲ್ಲ. ಅಧಿಕಾರದ ಅಮಲಿರಲಿಲ್ಲ.
1922 ಫೆಬ್ರವರಿ 23ರಂದು ಜನಿಸಿದ ಡಾ. ಬಾಳಪ್ಪನವರು 1942ನೇ ಇಸವಿಯ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮಹಾತ್ಮಗಾಂದಿಯವರ ಕರೆಯಂತೆ ಪಾಲ್ಗೊಂಡಿದ್ದು ಮಂಗಳೂರು ಜಿಲ್ಲಾ ನ್ಯಾಯಾಲಯದ ದ್ವಂಸ ಪ್ರಕರಣದಲ್ಲಿ ಬಂಧಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದರು. ನಂತರ ರೈತ ನಾಯಕರಾಗಿ, ಕಾಮರ್ಿಕ ನಾಯಕರಾಗಿ, ಉತ್ತಮ ವಾಗ್ಮಿಯಾಗಿ ಜನಪರ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದ ಬಾಳಪ್ಪ ಭೂ ಅಭಿವೃದ್ಧಿ ಬ್ಯಾಂಕು ನಿದರ್ೇಶಕರಾಗಿ, ನ್ಯಾಯಮೂತರ್ಿ ವೆಂಕಟಸ್ವಾಮಿ ಆಯೋಗದ ಸದಸ್ಯರಾಗಿ, ಮಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕಾನೂನು ನೆರವು ಸಮಿತಿ ಮುಖ್ಯಸ್ಥರಾಗಿ, ಮಂಗಳೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯರಾಗಿ, ದ.ಕ.ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ನಿದರ್ೇಶಕರಾಗಿ, ತಾಲೂಕು ಬೋಡರ್ು ಸದಸ್ಯರಾಗಿ, ಭೂ ನ್ಯಾಯ ಮಂಡಳಿ ಸದಸ್ಯರಾಗಿ, ಸಮಾಜ ಸೇವಾ ಸಹಕಾರಿ ಬ್ಯಾಂಕು ಸ್ಥಾಪಕ ಅಧ್ಯಕ್ಷರಾಗಿ, ಗೇಣಿದಾರರ ಸಂಘಟನೆ, ಹೋಟೆಲ್ ಮಾಲಕರ ಸಂಘಟನೆ ಮೊದಲಾದ ಸಾಮಾಜಿಕ, ಸಹಕಾರಿ ಸಂಘಟನೆಗಳಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯ ಚಳುವಳಿ ನಂತರ ಮುಷ್ಕರ, ಧರಣಿ, ಸಭೆ ಎಂದು ತನ್ನ ಜೀವನವನ್ನು ಸಮಾಜ ಸೇವೆಗೆಂದೇ ಮುಡಿಪಾಗಿಟ್ಟಿರುವುದು ಬಾಳಪ್ಪ ಅವರ ಸಾಮಾಜಿಕ ಸೇವಾ ಬದ್ಧತೆಯ ದ್ಯೋತಕವೇ ಸರಿ.
ಕಡಿಮೆ ವಿದ್ಯಾಬ್ಯಾಸ ಮಾಡಿದ್ದರೂ ವಿವಿದೆಡೆಯ ಸುತ್ತಾಟ, ಹೋರಾಟ, ಜೈಲುವಾಸದ ಸಂದರ್ಭದಲ್ಲಿ ವಿವಿಧ ಭಾಷೆಗಳನ್ನು ಕಲಿತ ಬಾಳಪ್ಪ ಅವರು ಕನ್ನಡ, ತುಳು, ಕೊಂಕಣಿ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರೌಡಿಮೆಯನ್ನು ಗಳಿಸಿದ್ದು ಹಿಂದೆ ಪತ್ರಿಕೆಯೊಂದರ ವರದಿಗಾರರಾಗಿ, ನಂತರ ಮಿತ್ರ ಎಂಬ ಕನ್ನಡ ಪತ್ರಿಕೆ ಹಾಗೂ ತುಳು ಸಿರಿ ಎಂಬ ಪ್ರಥಮ ತುಳು ಪತ್ರಿಕೆಯನ್ನು ಪ್ರಕಟಿಸಿ ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿಯೂ ಶ್ರಮಿಸಿದ್ಧರು. ಕಾರ್ಕಳದಲ್ಲಿ ಕೆಲವರ್ಷ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದ ಬಾಳಪ್ಪ ಅವರು ಬಂಟ್ವಾಳದಲ್ಲಿ ಸಮಾಜ ಸೇವಾ ಸಹಕಾರಿ ಬ್ಯಾಂಕನ ್ನು ಸ್ಥಾಪಿಸಿ 25ವರ್ಷಗಳ ಕಾಲ ಅದರ ನಾಯಕತ್ವವನ್ನು ವಹಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಲ್ಲದೆ ಆಥರ್ಿಕವಾಗಿ ಹಿಂದುಳಿದವರ ಮುನ್ನಡೆಯ ಪ್ರೇರಕ ಶಕ್ತಿಯಾಗಿದ್ದರು. 1968 ರ ಸುಮಾರಿಗೆ ಆಯರ್ುವೇದ ಪಾರ್ಮಸಿಯಲ್ಲಿ ಕೆಲಸ ಮಾಡಿ ಜ್ನಾನ ಸಂಪಾದಿಸಿದ ಹಿನ್ನೆಲೆಯಲ್ಲಿ ಅವರು ಡಾ. ಅಮ್ಮೆಂಬಳ ಬಾಳಪ್ಪರಾಗಿ ಗುರುತಿಸಿಕೊಂಡಿದ್ದರು. ಮೂಲತಃ ಗಾಂಧಿವಾಧಿಯಾಗಿದ್ದರೂ ಮುಂದೆ ಸಮಾಜವಾದಿ ನಾಯಕರಾಗಿ ಗುರುತಿಸಿಕೊಂಡಿದ್ದ ಬಾಳಪ್ಪ ಅವರು ಪ್ರಜಾ ಸೋಶಲಿಸ್ಟ್, ಜನತಾ ಪಕ್ಷ ನಂತರ ಜನತಾದಳದಲ್ಲಿ ಸಕ್ರೀಯಾರಾಗಿದ್ದು ಜಿಲ್ಲಾ, ರಾಜ್ಯ ಮಟ್ಟದ ನಾಯಕರಾಗಿ ಮುಂಚೂಣಿಯಲ್ಲಿದ್ದರು. ತಾನು ಕೈಯಾಡಿಸಿದ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ವಿಶೇಷ ಛಾಪು ಮೂಡಿಸಿದ್ದು ಬಾಳಪ್ಪ ಅವರ ಹೆಗ್ಗಳಿಕೆ.

ರಾಜಕೀಯ ಶಿಷ್ಯನಿಂದ ಅಭಿನಂದನಾ ಸಮ್ಮಾನ:
ಡಾ. ಅಮ್ಮೆಂಬಳ ಬಾಳಪ್ಪನವರ ಒಟ್ಟು ಸಾಧನೆಯನ್ನು ಗುರುತಿಸಿ 2006 ಅಕ್ಟೋಬರ್ 2ರಂದು ಅವರ 85ನೇ ವ ಸ್ಸಿನಲ್ಲಿ ಸಾರ್ವಜನಿಕವಾಗಿ ಅಭಿನಂದಿಸಲಾಗಿತ್ತು. ಬಾಳಪ್ಪನವರ ರಾಜಕೀಯ ಶಿಷ್ಯ ಎಂದೇ ಗುರುತಿಸಿಕೊಂಡಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ಜ ಫೆರ್ನಾಂಡೀಸ್ ಈ ಅಭಿನಂದನಾ ಕಾರ್ಯವನ್ನು ನೆರವೇರಿಸಿದ್ದರು. ಬಾಳಪ್ಪನವರಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶಿಸಿ ಅವರ ಮಾರ್ಗದರ್ಶನದಲ್ಲೇ ಮುನ್ನಡೆದು ಕೇಂದ್ರದ ಸಚಿವರಾಗಿದ್ದ ಜಾಜರ್್ ಪೆರ್ನಾಂಡೀಸ್ ಅವರು ನಂತರದ ದಿನಗಳಲ್ಲಿಯೂ ಮಂಗಳೂರು ಹಾಗೂ ಉಡುಪಿಗೆ ಬರುತ್ತಿದ್ದಾಗ ಅಮ್ಮೆಂಬಳ ಅವರನ್ನು ಬೇಟಿಯಾಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. .

ಇಂದು (15-5-2015) ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಉದ್ಘಾಟನೆ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಪ್ರಥಮ ಪುಣ್ಯ ತಿಥಿಯು ಮೇ 15 ಶುಕ್ರವಾರ  ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಿ.ಸಿ.ರೋಡಿನಲ್ಲಿ ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ 11ಕ್ಕೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷರು, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನೂತನ ಪ್ರತಿಷ್ಠಾನವನ್ನು ಉದ್ಘಾಟಿಸುವರು. ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸುವರು. ದ.ಕ. ಮತ್ತು ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅಳಪೆ, ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಹಿರಿಯ ಪತ್ರಕರ್ತ ನವೀನ್ ಚಂದ್ರ ಪಾಲ್ ಮೊದಲಾದವರು ಭಾಗವಹಿಸುವರು.
ಅಮ್ಮೆಂಬಳ ಬಾಳಪ್ಪ ಅವರು ಸಮಾಜಕ್ಕೆ ನೀಡಿದ ನಿಸ್ವಾರ್ಥ ಸೇವೆ ಅನನ್ಯವಾದುದು, ಅಪಾರವಾದುದು. ಈ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಾ ಬಾಳಪ್ಪ ಅವರ ಹೆಸರನ್ನು ಜನಮಾನಸದಲ್ಲಿ ಶಾಶ್ವತವಾಗಿರಿಸುವ ಉದ್ಧೇಶದಿಂದ ಇದೀಗ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಬಿ.ಸಿ.ರೋಡಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಬಾಳಪ್ಪ ನೆನಪಿನಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಥರ್ಿಕವಾಗಿ ಹಿಂದುಳಿದ ವಿವಿಧ ಸ್ತರಗಳ ಜನಸಮುದಾಯಕ್ಕೆ ಆರೋಗ್ಯ, ಶಿಕ್ಷಣ ಮತ್ತಿತರ ಸೇವೆ ನೀಡುವರೇ ಪ್ರತಿಷ್ಠಾನ ತೀಮರ್ಾನಿಸಿದೆ.
ಅಮ್ಮೆಂಬಳ ಆನಂದ ಅಧ್ಯಕ್ಷರಾಗಿ, ಕೆ.ದಯಾನಂದ ಉಪಾಧ್ಯಕ್ಷರಾಗಿ, ರವೀಂದ್ರನಾಥ್ ಕೋಶಾಧಿಕಾರಿಯಾಗಿ, ಉಮೇಶ್ ಪಿ.ಕೆ.ಕಾರ್ಯದಶರ್ಿಯಾಗಿ, ರಮೇಶ್ ಬಂಟ್ವಾಳ, ಡಿ.ಎಂ.ಕುಲಾಲ್, ಎಂ.ಆರ್.ನಾರಾಯಣ, ದಾಮೋದರ ಬಿ.ಎಂ., ತೇಜಸ್ವಿರಾಜ್, ಸಂದೀಪ್ ಕುಮಾರ್ ಎಚ್. ಪ್ರತಿಷ್ಠಾನದ ಟ್ರಸ್ಟಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.

.ಗೋಪಾಲ ಅಂಚನ್

 

By suddi9

Leave a Reply

Your email address will not be published. Required fields are marked *