ಉಡುಪಿ, ಸೆರಾಕೇಶ್ ಸಂಸ್ಥೆಯ ವತಿಯಿಂದ ಜರಗಿದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ. 3 ರಂದು ಕೇಂದ್ರದ ಆದಿ ಉಡುಪಿ ಸಭಾಭವನದಲ್ಲಿ ಜರಗಿತು. ಅನಾರೋಗ್ಯದವರಿಗೆ ಕೇಂದ್ರ ನೀಡುತ್ತಿರುವ ಉಚಿತ ಸೌಲಭ್ಯವನ್ನು ಉಪಯೋಗಿಸಿ ಕೊಳ್ಳುತ್ತಿರುವವರ ಮಕ್ಕಳಿಗಾಗಿ ಶಿಬಿರದ ವ್ಯವಸ್ಥೆ ಮಾಡಲಾಗಿತ್ತು. ಹತ್ತು ದಿನಗಳ ಶಿಬಿರದಲ್ಲಿ 4 ರಿಂದ 12 ವರ್ಷದ 65ಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
DSC00662
ಶಿಬಿರಾರ್ಥಿಗಳ ಚಿತ್ರಕಲೆ, ಛದ್ಮವೇಷ, ನೃತ್ಯ, ಸಂಗೀತ, ರಸಪ್ರೆಶ್ನೆ, ಸಂಗೀತ ಕುರ್ಚಿ ,ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದರು. ಪ್ರತಿಭಾ ಪ್ರದರ್ಶನ ಸ್ಫರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ,ಅಬ್ದುಲ್ ಜಮೀಲ್ ಪಾಂಡುಬೆಟ್ಟು, ರವಿರಾಜ ಶೆಟ್ಟಿ ಬ್ರಹ್ಮಾವರ, ಪ್ರಾನ್ಸಿಸ್ಶಂಕರಪುರ, ಡಾ| ಅಶೋಕ ಶೆಣೈ, ಎಸ್.ಎಸ್.ತೋನ್ಸೆ ಬಹುಮಾನ ವಿತರಿಸಿದರು. ಕೇಂದ್ರದ ಮುಖ್ಯಸ್ಥ ಪ್ರದೀಪ್ ಕುಮಾರವ ಬೈಲಕೆರೆ ಶಿಬಿರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕೇಂದ್ರದ ಮಾರ್ಗದರ್ಶಕರಾದ ರೇಕಾ ಮಲ್ಪೆ, ಲಕ್ಷ್ಮೀತಾ ಸಾಲಿಯಾನ್, ಅಮಿತ ಗುಜ್ಜರಬೆಟ್ಟು, ಭವ್ಯ ಬೆಂಗರೆ, ಸ್ವಾತಿ ಮೂಡಬೆಟ್ಟು, ಯಶಸ್ವಿ ಬಾಪುತೋಟ, ಪೂರ್ಣಿಮಾ ಕೋಟಿಯಾನ್, ಸೌಮಿತ ಶಿಬಿರದ ಯಶಸ್ವಿಗಾಗಿ ಸಹಕರಿಸಿದರು

By suddi9

Leave a Reply

Your email address will not be published. Required fields are marked *